ಧಾರವಾಡ

ಮಠಾಧೀಶರಾಗಲು ಜ್ಞಾನ ಮುಖ್ಯ

ಹಾವೇರಿ: ಮಠಾಧೀಶರಾಗಲು ಯಾವುದೇ ಶೈಕ್ಷಣಿಕ ಅರ್ಹತೆ ಮುಖ್ಯವಲ್ಲ. ತತ್ವ, ಸಿದ್ಧಾಂತ ನೆಲೆಗಟ್ಟಿನ ಮೇಲೆ ಸಮಾಜ ಮತ್ತು ಮಠವನ್ನು ಸಮತೋಲನದಿಂದ ನಿಭಾಯಿಸುವ ಜ್ಞಾನ ಹೊಂದಿದವರು ಸ್ವಾಮೀಜಿಗಳಾಗಲು ಯೋಗ್ಯರು ಎಂದು ಹುಬ್ಬಳ್ಳಿಯ ಮೂರುಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಹೇಳಿದರು. ನಗರದ ಹುಕ್ಕೇರಿಮಠದ ಶಿವಾನುಭವ ಮಂಟಪದಲ್ಲಿ ಶನಿವಾರ ನಡೆದ ಸದಾಶಿವ ಶ್ರೀಗಳ ಜ್ಯೇಷ್ಠ ಮಾಸದ ನಿಮಿತ್ತ ಲೋಕಕಲ್ಯಾಣಾರ್ಥವಾಗಿ ಕೈಗೊಂಡಿದ್ದ ಮೌನ ಅನುಷ್ಠಾನ ಮಂಗಲ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನೆ ನೀಡಿದರು. ಮಠಗಳ ಭವಿಷ್ಯ ಮಠಾಧೀಶರ ಅನುಭವ, ಸಿದ್ಧಾಂತ, ಅನುಷ್ಠಾನಗಳ ಮೇಲೆ ನಿಂತಿರುತ್ತದೆ. ಜ್ಞಾನ, ಅನುಭವಗಳ ಮುಂದೆ ಪದವಿ ಏನೂ ಕೆಲಸ ಮಾಡುವುದಿಲ್ಲ. ಕೇವಲ ಶೈಕ್ಷಣಿಕ ಸಂಸ್ಥೆ ನಡೆಸುವುದು ಅನ್ನದಾನ ಮಾಡುವುದು ಮುಖ್ಯವಲ್ಲ. ಮಠಾಧೀಶರು ಎಷ್ಟು ಧಾರ್ಮಿಕರಾಗಿದ್ದಾರೆಂಬುದು ಮುಖ್ಯ ಎಂದರು. ಹುಕ್ಕೇರಿಮಠದ ಸದಾಶಿವ ಶ್ರೀಗಳು ಮೌನ ಅನುಷ್ಠಾನದ ಮಂಗಲ ನುಡಿಗಳನ್ನಾಡಿದರು. ಸಂಸದ ಶಿವಕುಮಾರ ಉದಾಸಿ ಮಾತನಾಡಿದರು. ಡಾ. ಮಾಧುರಿ ದೇವಧರ, ಸಿ.ಆರ್. ಬಳ್ಳಾರಿ, ಎ.ಪಿ. ದುಮ್ಮಾಳ ಅವರನ್ನು ಶ್ರೀಗಳು ಸನ್ಮಾಸಿದರು. ಬಳಿಕ ಬಡ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವನ್ನು ವಿತರಿಸಿದರು. ಸವಣೂರಿನ ಅಡವಿ ಸ್ವಾಮಿಮಠದ ಕುಮಾರಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಶಿವಬಸವ ಶ್ರೀ, ಗದಿಗೇಶ್ವರ ಶ್ರೀ, ಶಾಸಕ ರುದ್ರಪ್ಪ ಲಮಾಣಿ, ಸಂಜೀವಕುಮಾರ ನೀರಲಗಿ, ಪಿ.ಡಿ. ಶಿರೂರ, ಬಿ. ಬಸವರಾಜ, ವೀರಣ್ಣ ಅಂಗಡಿ, ಸಿ.ಎಸ್. ಮರಳಿಹಳ್ಳಿ, ಶಿವಯೋಗಿ ವಾಲೀಶೆಟ್ಟರ್ ಇತರರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!