ಗದಗ

ರಾಜೀವ ಗಾಂಧಿ ಕನಸು ನನಸಾಗಲಿದೆ

ಕನ್ನಡಪ್ರಭ ವಾರ್ತೆ, ರೋಣ, ಫೆ. 11
ಅಧಿಕಾರ ವಿಕೇಂದ್ರೀಕರಣ ಮತ್ತು ಅವಕಾಶ ವಂಚಿತರ ಸಬಲೀಕರಣ ಉದ್ದೇಶದಿಂದ ಪಂಚಾಯತ್‌ರಾಜ್ ಸಂಘಟನೆ ವ್ಯವಸ್ಥೆ ಜಾರಿಗೆ ತರುವ ಉದ್ದೇಶ ಹೊಂದಿದ್ದ ರಾಜೀವ ಗಾಂಧಿಯವರ ಕನಸು ನನಸಾಗಲಿದ್ದು, ಸಂಘಟನೆಯ ಸದಸ್ಯರು ಒಗ್ಗಟ್ಟಿನಿಂದ ಶ್ರಮಿಸಿದ್ದಲ್ಲಿ ಕಾಂಗ್ರೆಸ್ ಭಲಗೊಳ್ಳುತ್ತದೆ ಎಂದು ರಾಜೀವ ಗಾಂಧಿ ಪಂಚಾಯತ್‌ರಾಜ್ ಸಂಘಟನೆಯ ರಾಷ್ಟ್ರೀಯ ಸಂಚಾಲಕ ಮಣಿಶಂಕರ ಅಯ್ಯರ್ ಹೇಳಿದರು.   
ಅವರು ಸೋಮವಾರ ಪಟ್ಟಣದ ಆರ್.ಎಸ್. ಪಾಟೀಲ ಜಿನ್ನಿಂಗ್ ಪ್ಯಾಕ್ಟರಿ ಆವರಣದಲ್ಲಿ ನಡೆದ ತಾಲೂಕು ಮಟ್ಟದ ರಾಜೀವ ಗಾಂಧಿ ಪಂಚಾಯತ್‌ರಾಜ್ ಸಂಘಟನೆಯ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ಶಾಸಕ, ಮಂತ್ರಿಗಳು ಕುರ್ಚಿಗಾಗಿ ಪರಸ್ಪರ ಕಿತ್ತಾಡುತ್ತಿದ್ದಾರೆ. ಕೋಮು ಸಾಮರಸ್ಯದ ನಾಡಿನಲ್ಲಿ ಜನರಲ್ಲಿ ಹಗೆತನದ ಬೀಜ ಬಿತ್ತಿ ಮಾನವೀಯ ಮೌಲ್ಯ ಬಲಿಕೊಡುತ್ತಿದ್ದಾರೆ. ಧರ್ಮದ ಹೆಸರಿನಲ್ಲಿ ವಿಭಜನೆ ಮಾಡುವಂತಹ ವ್ಯಕ್ತಿಯಾಗಿದ್ದ ಜಗದೀಶ ಶೆಟ್ಟರ್‌ರನ್ನು ಅದ್ಯಾವ ರೀತಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಮಾಡಿದ್ದಾರೆಂದು ತಿಳಿಯದಾಗಿದೆ ಎಂದು ವ್ಯಂಗ್ಯವಾಡಿದರು.
ಅಭಿವೃದ್ಧಿ ಹೆಸರಿನಲ್ಲಿ ರಾಜ್ಯದ ಜನತೆಯನ್ನು ಬಿಜೆಪಿ ಸರ್ಕಾರ ವಂಚಿಸುತ್ತಿದೆ. ಇದಕ್ಕೆ ತಕ್ಕ ಪಾಠ ಕಲಿಸುವಲ್ಲಿ ಪಂಚಾಯತ್ ರಾಜ್ಯ ಸಂಘಟನೆಯ ಕಾಂಗ್ರೆಸ್ ಸದಸ್ಯರು ಮುಂದಾಗಬೇಕು. ಸರ್ಕಾರದ ಮಹತ್ವ ಪೂರ್ಣ ಯೋಜನೆಗಳನ್ನು ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರಿಗೂ ತಿಳಿಸುವ ಉದ್ದೇಶವನ್ನು ಸಂಘಟನೆ ಹೊಂದಿದೆ. ರಾಜಕಾರಣಿಗಳು ಪ್ರಜೆಗಳ ಪ್ರಭುತ್ವದ ಅಸ್ತಿತ್ವಕ್ಕಾಗಿ ಶ್ರಮಿಸಿ, ಜನಪರ ಕಾಳಜಿಯುಳ್ಳ ಆಡಳಿತವನ್ನು ನೀಡಬೇಕು. ಎಲ್ಲರೂ ಒಗ್ಗಟ್ಟಿನಿಂದ ಸಂಘಟನೆ ಬಲಪಡಿಸಬೇಕು. ಹದಗೆಟ್ಟ ವ್ಯವಸ್ಥೆಯನ್ನು ಬದಲಾಯಿಸಲು ಪಂಚಾಯತ್‌ರಾಜ ಸಂಘಟನೆಯು ಅತ್ಯಗತ್ಯವಾಗಿದೆ ಎಂದರು. ಮಾಜಿ ಶಾಸಕ ಜಿ.ಎಸ್. ಪಾಟೀಲ, ಡಿ.ಆರ್. ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ನಿಂಗಪ್ಪ ಬೇವಿನಮರದ, ರೋಣ ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಐ.ಎಸ್. ಪಾಟೀಲ ಮಾತನಾಡಿದರು. ಈ ಸಂದರ್ಭದಲ್ಲಿ ವೀಕ್ಷಕಿ ಅರುಣಾ ಕಣ್ಣೂರ, ಜಿ.ಎಸ್. ಗಡ್ಡದೇವರಮಠ, ವಾಸಣ್ಣ ಕುರಡಗಿ, ಪ್ರಭು ಮೇಟಿ, ಎಸ್.ಎನ್. ಕಾತರಕಿ, ಡಾ. ಆರ್.ಬಿ. ಬಡವರಡ್ಡೇರ, ದಶರಥ ಗಾಣಿಗೇರ, ವೀರಣ್ಣ ಸೊನ್ನದ, ಗಂಗಣ್ಣ ಸೊರಟೂರ, ಮಿಥುನ್ ಪಾಟೀಲ, ಮಂಜುಳಾ ಹುಲ್ಲಣ್ಣವರ, ಪರಶುರಾಮ ಅಳಗವಾಡಿ, ಸಿದ್ದು ಪಾಟೀಲ, ನೀಲವ್ವ ಮುಗಳಿ ಉಪಸ್ಥಿತರಿದ್ದರು. ವೀರಣ್ಣ ಶೆಟ್ಟರ ಸ್ವಾಗತಿಸಿದರು. ವಿ.ಬಿ. ಸೋಮನಕಟ್ಟಿಮಠ ನಿರೂಪಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!