ನರಗುಂದ: ಕಲ್ಯಾಣ ನಾಡಿನಲ್ಲಿ 12ನೇ ಶತಮಾನದಲ್ಲಿ ವಿಶ್ವ ಗುರು ಬಸವಣ್ಣವರ ಅನುಭವ ಮಂಟಪದಲ್ಲಿ ಶರಣೆ ಅಕ್ಕಮಹಾದೇವಿ ಸಮಾಜಕ್ಕೆ ನೀಡಿದ ಕೊಡುಗೆ ಅಪಾರ ಎಂದು ಪಂಚಗೃಹ ಗುಡ್ಡದ ಹಿರೇಮಠದ ಸಿದ್ಧಲಿಂಗ ಶ್ರೀಗಳುಹೇಳಿದರು.
ಅವರು ಪಟ್ಟಣದ ಪಂಚಗೃಹ ಗುಡ್ಡದ ಹಿರೇಮಠದಲ್ಲಿ ಈಚೆಗೆ 6ನೇ ದಿನದ ಶ್ರಾವಣ ಮಾಸದ ನಿಮಿತ್ತ ಬಸವ ಕೇಂದ್ರ ಹಾಗೂ ಮುರುಘರಾಜೇಂದ್ರ ಫ್ರೀ ಬೋರ್ಡಿಂಗ್ ಟ್ರಸ್ಟ್ ಇವುಗಳ ಆಶ್ರಯದಲ್ಲಿ ಏರ್ಪಡಿಸಿದ್ದ ವಚನಾಮೃದ ಶ್ರಾವಣ ಕಾರ್ಯಕ್ರಮದಲ್ಲಿ ಮಾತನಾಡಿದರು.
12ನೇ ಶತಮಾನದ ಅನುಭವ ಮಂಟಪದಲ್ಲಿ ಮಹಿಳಾ ಶರಣೆಯರಲ್ಲಿ ಅಕ್ಕಮಹಾದೇವಿ ವಿಚಾರ, ಚಿಂತನೆ ಯಾರು ಮಾಡುತ್ತರಲಿಲ್ಲವೆಂದು ನಮಗೆ ಇತಿಹಾಸದ ಮೂಲಕ ತಿಳಿದು ಬರುತ್ತದೆ. ಅಂತಹ ಮಹಾ ಶರಣೆಯ ವಚನಗಳನ್ನು ಇಂದಿನ ಮಹಿಳೆಯರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಬನಹಟ್ಟಿ ಪಪೂ ಕಾಲೇಜನ ಉಪನ್ಯಾಸಕ ಪಿ.ಬಿ. ಬಡಿಗೇರ, ಚನ್ನಪ್ಪ ಕಂಠಿ, ವಿ.ಎನ್. ಕೊಳ್ಳಿಯವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಬಿ. ಹುಲಗೂರ, ಎಂ.ವಿ. ದೇಮಶಟ್ಟಿ, ಆರ್.ಬಿ. ಚಿನಿವಾಲರ, ಎಂ.ವಿ. ಕಟಗಿ, ಬಿ.ಎಚ್. ಕ್ಯಾರಕೊಪ್ಪ ಅವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು. ಎಫ್.ಆರ್. ಪಾಟೀಲ, ಸಿ.ಎಚ್. ಕೋರಿ, ಎಸ್.ಆರ್. ಹುಂಬಿ, ರಮೇಶಗೌಡ ಕರಕನಗೌಡ್ರ, ಸಿ.ಎಸ್. ಸಾಲೂಟಿಗಿಮಠ, ಚನ್ನಪ್ಪ ಇತರರು ಇದ್ದರು.