ನರಗುಂದ: ತಾಲೂಕಿನಾದ್ಯಂತ ಅಲ್ಪ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಇದರಿಂದಾಗಿ ನಿಮ್ಮ ಮನೆಯ ಸುತ್ತಮುತ್ತಲಿನ ಚರಂಡಿ, ತೆಗ್ಗು ಪ್ರದೇಶಗಳಲ್ಲಿ ನಿಲ್ಲುವ ನೀರಿನಿಂದಾಗಿ ಸೊಳ್ಳೆಗಳು ಉತ್ಪತ್ತಿಯಾಗುವ ಸಂಭವವಿದ್ದು, ಈ ಕುರಿತು ಸಾರ್ವಜನಿಕರು ಜಾಗೃತಿ ವಹಿಸಬೇಕಿದೆ ಎಂದು ಜಗಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ಸಿ.ಆರ್. ಜಾಲಿಕೊಪ್ಪ ಹೇಳಿದರು.
ಅವರು ತಾಲೂಕಿನ ಹುಣಸಿಕಟ್ಟಿಯ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಈಚೆಗೆ ಹಮ್ಮಿಕೊಳ್ಳಲಾಗಿದ್ದ ಡೆಂಘೀ ವಿರೋಧಿ ಮಾಸಾಚರಣೆ ಜಾಥಾ ಸಮಾರಂಭದಲ್ಲಿ ಮಾತನಾಡಿದರು. ಮಳೆಗಾಲದಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುವ ಸಂಭವವಿದ್ದು, ತಮ್ಮ ಮನೆಯ ಸುತ್ತಮುತ್ತಲೂ ನೀರು ನಿಲ್ಲದಂತೆ ಜನತೆ ಜಾಗೃತಿ ವಹಿಸಬೇಕಿದೆ. ಜನತೆ ಕುಡಿಯುವ ನೀರು, ಮನೆಯಲ್ಲಿರುವ ಪಾತ್ರೆಗಳನ್ನು ಕಡ್ಡಾಯ ಮುಚ್ಚಬೇಕು. ಸುತ್ತಲಿನ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳುವಂತೆ ಹೇಳಿದರು.
ಆರೋಗ್ಯ ಶಿಕ್ಷಣಾಧಿಕಾರಿ ಜಿ.ವಿ. ಕೊಣ್ಣೂರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಜನತೆಗೆ ಸೊಳ್ಳೆ ನಿಯಂತ್ರಣ ಕುರಿತು ಸರಿಯಾದ ಮಾಹಿತಿ ಇಲ್ಲದೇ ಇರುವುದರಿಂದ ಸೊಳ್ಳೆಗಳ ನಿಯಂತ್ರಣದಲ್ಲಿ ಅಲ್ಪಪ್ರಮಾಣದ ಹಿನ್ನಡೆಯಾಗುತ್ತಿದೆ. ಈ ಕುರಿತು ಹಳ್ಳಿಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಿ ಜನರಲ್ಲಿ ಶುಚಿತ್ವದ ಕುರಿತು ಮನವರಿಕೆ ಮಾಡಿ ಎಂದರು. ಡಾ. ಎಸ್.ಎ. ವಸ್ತ್ರದ, ವಿ.ಕೆ. ತಳವಾರ, ಎಸ್.ಟಿ. ದೊಡಮನಿ ಮಾತನಾಡಿದರು. ರಾಮಣ್ಣ ಜಲಗೇರ, ಹನುಮಂತಪ್ಪ ಹಾಲಪ್ಪನವರ, ಡಾ. ಎಲ್.ಎಚ್. ಕರಮಡಿ, ಜಿ.ಎಸ್. ಸಿದ್ನಾಳ, ಕಲ್ಲವ್ವ ಮುಳ್ಳರ, ಈರವ್ವ ತೆಂಬದಮನಿ, ಈರಪ್ಪ ಲೋಕರ, ಎ.ಎಸ್. ಮನಿಕಟ್ಟಿ, ಎನ್.ಬಿ. ಫಕೀರಗೌಡ್ರ, ಆರ್.ಎಚ್. ಚೌಡನ್ನವರ, ಎಸ್.ಎಸ್. ಉಪ್ಪಾರ, ರಶ್ಮೀ ರಾಯ್ಕರ, ಅರುಣಬಾಯಿ ಪುತ್ರಿ, ಗೀತಾ ಗೊಂದಳಿ, ಗಂಗಾ ಗೊಂದಳಿ, ಮಲ್ಲಿಕಾರ್ಜುನ ಫಕೀರಗೌಡ್ರ, ಮಲ್ಲಿನಗೌಡ ತೀರಕನೌಡ್ರ, ಈಶ್ವರಯ್ಯ ಹಿರೇಮಠ ಇದ್ದರು.