ಗದಗ: ನಾನಾ ಬೇಡಿಕೆ ಈಡೇರಿಸಲು ಆಗ್ರಹಿಸಿ ಬುಧವಾರ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಹಿಂದೂಗಳ ಆರಾಧ್ಯದೇವ ಭಗವಾನ್ ಕೃಷ್ಣನನ್ನು ಅವಮಾನಿಸುವ ರೀತಿಯಲ್ಲಿ ಚಿತ್ರಿಸಿರುವ ಚಲನಚಿತ್ರವನ್ನು ನಿರ್ಬಂಧ ಹೇರಬೇಕು. ತೆಲಂಗಾಣವು ಮುಸಲ್ಮಾನರಿಗೆ ನೀಡಿದ ಶೇ. 12ರಷ್ಟು ಮೀಸಲಾತಿಯನ್ನು ರದ್ದುಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.
ತೆಲಂಗಾಣ ಸರ್ಕಾರವು ಮುಸಲ್ಮಾನರಿಗೆ ನೀಡಿದ ಶೇ. 12ರಷ್ಟು ಮೀಸಲಾತಿಯು ಸಂವಿಧಾನಬಾಹಿರ ಮತ್ತು ನ್ಯಾಯಾಲಯವನ್ನು ಅವಮಾನಿಸುವಂತಿದ್ದು, ಅದನ್ನು ರದ್ದುಗೊಳಿಸಬೇಕು. ಅಧ್ಯಕ್ಷ ಚಲನಚಿತ್ರದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಯನ್ನು ನೋಯಿಸುವ ದೃಶ್ಯಗಳನ್ನು ಚಿತ್ರೀಕರಿಸಲಾಗಿದ್ದು, ಇದನ್ನು ಕೂಡಲೇ ನಿರ್ಬಂಧಿಸಬೇಕು. ಈ ಸಂದರ್ಭದಲ್ಲಿ ಕಾರ್ಯಕರ್ತರು ಹಿಂದೂ ಧರ್ಮಾಭಿಮಾನಿಗಳು ಹಿಂದೂ ಪರ ಸಂಘಟನೆಗಳು ಭಾಗವಹಿಸಿದ್ದರು.