ಗದಗ

ಕಾಟಾಚಾರದ ಗ್ರಾಮಸಭೆ ಬೇಡ

ಗಜೇಂದ್ರಗಡ:  ಸರ್ಕಾರ ಗ್ರಾಮೀಣರ ಬದುಕು ಹಸನಾಗಿಸಲು ರೂಪಿಸಿರುವ ಯೋಜನೆಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಬೇಕು. ಕೇವಲ ಕಾಟಾಚಾರದ ಗ್ರಾಮಸಭೆ ನಡೆಸಿದರೆ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ ಎಂದು ನೋಡಲ್ ಅಧಿಕಾರಿ ಡಿ.ವಿ. ಅಸುಂಡಿ ಹೇಳಿದರು. ಸಮೀಪದ ರಾಜೂರು ಗ್ರಾಪಂನಲ್ಲಿ ಸೋಮವಾರ ನಡೆದ ಗ್ರಾಮಸಭೆಯಲ್ಲಿ ಮಾತನಾಡಿದ ಅವರು, ಪಿಡಿಒ ಸೇರಿದಂತೆ ಎಲ್ಲ ಅಧಿಕಾರಿಗಳಿಗೆ ಸಲಹೆ ನೀಡಿದರು. ಸಭೆಯಲ್ಲಿ ಹಾಜರಿದ್ದ ವಿವಿಧ ಇಲಾಖೆಯ ಅಧಿಕಾರಿಗಳಿಂದ ಗ್ರಾಮಸ್ಥರು ಸಮಸ್ಯೆ ಪರಿಹರಿಸಿಕೊಂಡರು. ಬಳಿಕ ಪಿಡಿಒ ಸುರೇಶ ನಾಯಕ್ ಮಾತನಾಡಿ, ಗ್ರಾಪಂಗೆ 2013-14ರ ಉದ್ಯೋಗ ಖಾತ್ರಿ ಹಿಂಬಾಕಿಯ ರು. 68 ಲಕ್ಷ ಬಿಡುಗಡೆಯಾಗಿದ್ದು, ಶೀಘ್ರ ಕಾಮಗಾರಿ ಕೈಗೊಂಡ ಫಲಾನುಭವಿಗಳಿಗೆ ಹಣ ವಿತರಿಸಲಾಗುವುದು. ಜತೆಗೆ ಪ್ರಸಕ್ತ ವರ್ಷದ ಇಂದಿರಾ ಆವಾಸ್ ಯೋಜನೆಗೆ ಗ್ರಾಪಂ ವ್ಯಾಪ್ತಿಯ 627 ಮಂದಿ ಅರ್ಜಿ ಸಲ್ಲಿಸಿದ್ದರು. ಅದರಂತೆ 27 ವಸತಿ ಫಲಾನುಭವಿಗಳಿಗೆ ಮಂಜೂರು ದೊರಕಿದೆ ಎಂದರು.
ಸರ್ಕಾರ ವಸತಿ ರಹಿತ ಬಡವರಿಗೆ ಸೂರು ಕಲ್ಪಿಸಲು ಯೋಜನೆ ರೂಪಿಸಿದೆ. ಆದರೆ ಯೋಜನೆ ವಸತಿಯುಳ್ಳವರ ಪಾಲಾಗುತ್ತಿವೆ ಎಂದು ಗ್ರಾಪಂ ಮಾಜಿ ಸದಸ್ಯ ಮೂಕಪ್ಪ ದಂಡಿನ ಆರೋಪಿಸಿದರು. ಬಳಿಕ ಮಧ್ಯ ಪ್ರವೇಶಿಸಿದ ನೋಡಲ್ ಅಧಿಕಾರಿ ತಕ್ಷಣ ಅಂತಹ ಪ್ರಕರಣಗಳ ಬಗ್ಗೆ ನಿಗಾವಹಿಸಿ ಅರ್ಹ ಫಲಾನುಭವಿಗಳಿಗೆ ಯೋಜನೆ ದೊರೆಯುವಂತೆ ಮಾಡಿ ಎಂದು ತಾಕೀತು ಮಾಡಿದರು.
ಮುಂದಿನ ಸಭೆಯಲ್ಲಿ ಅಧಿಕಾರಿಗಳು ಹಾಜರಿದ್ದರೆ ಮಾತ್ರ ಗ್ರಾಮಸಭೆಯನ್ನು ನಡೆಸಲು ಅವಕಾಶ ನೀಡಲಾಗುವುದು. ಇಲ್ಲದಿದ್ದರೆ  ಬೀದಿಗಿಳಿದು ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಗ್ರಾಪಂ ಅಧ್ಯಕ್ಷ ಕಳಕಪ್ಪ ಕಂಬಳಿ, ಸದಸ್ಯರಾದ ಶಿವಕುಮಾರ ಜಾಧವ, ಪರಶುರಾಮ್ ಚಿಲಝರಿ, ಕೃಷಿ ಅಧಿಕಾರಿ ಕೆ.ಎಚ್. ಗಂಗೂರು, ಆರೋಗ್ಯ ಆಧಿಕಾರಿ ಎಸ್.ಎಂ. ಹಾದಿಮನಿ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!