ವಾಡಿ: ಪಟ್ಟಣದ ಸೋನುಬಾಯಿ ನಗರದಲ್ಲಿ ಫೆ.8 ಶುಕ್ರವಾರ ಕನಕದಾಸರ 525ನೇ ಜಯಂತ್ಯುತ್ಸವ ಆಯೋಜಿಸಲಾಗಿದೆ. ಭೋಜಲಿಂಗೇಶ್ವರ ಸಿದ್ದ ಸಂಸ್ಥಾನಮಠ ಸುಗೂರ ಪೀಠಾಧಿಪತಿ ಶ್ರೀಹಿರಗೆಪ್ಪಾ ತಾತನವರು, ಷ.ಬ್ರ.ಅಭಿವನ ಮುನೀಂದ್ರ ಶಿವಾಚಾರ್ಯರು ಕಟ್ಟಿಮನಿ ಹಿರೇಮಠ ಸಂಸ್ಥಾನ ಹಲಕಟ್ಟಿ, ಇವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.ಶಾಸಕ ವಾಲ್ಮೀಕಿ ನಾಯಕ ಕಾರ್ಯಕ್ರಮ ಉದ್ಘಾಟಿಸಲ್ಲಿದ್ದಾರೆ. ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ದಳವಾಯಿ ಜ್ಯೋತಿ ಬೆಳಗಿಸುವರು. ಕ.ಪ್ರ.ಕುರಂಬರ ಸಂಘ ಅಧ್ಯಕ್ಷ ಜುಮ್ಮಣ್ಣ ಪೂಜಾರಿ, ಅಧ್ಯಕ್ಷತೆ ವಹಿಸಲಿದ್ದಾರೆ.ಇಎಸ್‌ಐ ಸಲಹಾ ಸಮಿತಿ ಸದಸ್ಯರು, ಕ.ಪ್ರ.ಕುರಂಬರ ಸಂಘ ಜಿಲ್ಲಾಧ್ಯಕ್ಷ ದೇವಿಂದ್ರಪ್ಪ ಪೂಜಾರಿ, ಎಸಿಸಿ ಕಂಪನಿ ನಿರ್ದೇಶಕರು ಡಾ ಎಸ್.ಬಿ.ಸಿಂಗ್, ಟೋಪಣ್ಣ ಕೋಮಟೆ, ಮಲ್ಲಿಕಾರ್ಜುನ ಪೂಜಾರಿ, ಜೆ.ಆರ್.ಪಿ.ಸಿ.ಸದಸ್ಯರು ಸಿಕಂದರಾಬಾದ್ ಶ್ರೀನಿವಾಸ ಸಗರ, ಪುರಸಭೆ ಅಧ್ಯಕ್ಷೆ ಹಸೀನಬೇಗಂ ಖುರೇಷಿ, ಅಣ್ಣಾರಾವ ಪಾಟೀಲ, ಶೀವರಾಮ ಪವರ, ಜಾಫರ್ ಪಟೇಲ, ಪಿ.ಎಲ್.ಡಿ.ಬ್ಯಾಕ ಅಧ್ಯಕ್ಷರು ಮಲ್ಲಿನಾಥ ಇಂದೂರ, ಜಂಗಮ ಸಮಾಜ ಅಧ್ಯಕ್ಷರು ನೀಲಯ್ಯ ಸ್ವಾಮಿ, ಭೀಮರಾವ ದೋರೆ, ಐ.ಪಿ. ಸ್ಯಾಮಸನ್, ತಿಪ್ಪಣ ವಗ್ಗರ, ಸಿಪಿಐ ಪೋಲಿಸ್ ಚಂದ್ರಕಾಮತ ಪೂಜಾರಿ, ಪಿಎಸ್‌ಐ ದೋಡಮನಿ, ಮರಲಿಂಗ ಗೋಳಾ, ಅಣ್ಣರಾವ ಹಡಪದ, ಮಹೇಶ, ನಾಗೇಂದ್ರ ಬಮ್ಮನಳಿ ಹಾಗೂ ಕಸಾಪ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಉಪನ್ಯಾಸ ನೀಡಲಿದ್ದಾರೆ.
ಇಂದು ಉಪನ್ಯಾಸ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಫೆ.8 ರಂದು ಬೆಳಿಗ್ಗೆ 10.30ಕ್ಕೆ ಆಳಂದ ತಾಲೂಕಿನ ಸಾವಳೇಶ್ವರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ವಿಷಯ ಕುರಿತು ಉಪನ್ಯಾಸ ಮತ್ತು ಸಂವಾದ ಏರ್ಪಡಿಸಿದೆ. ಕೋಟನೂರ(ಡಿ)ದ ಶಿವಶಂಕರ ಬಿರಾದಾರ ಸಂವಾದ ನಡೆಸಿಕೊಡಲಿದ್ದಾರೆ.
ನಾಳೆ ಸಂಗೀತ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಗುಲ್ಬರ್ಗ ತಾಲೂಕಿನ ಬೆಳಕೋಟಾ ವಿಠ್ಠಲ ರುಕ್ಮೀಣಿ ದೇವಸ್ಥಾನದಲ್ಲಿ ಫೆ. 9ರಂದು ಸಂಜೆ 6.30ಕ್ಕೆ ಬಸವರಾಜ ಎ. ಬೆಳಕೋಟಾ ಅವರಿಂದ ಸಂಗೀತ ಜರುಗಲಿದೆ.