ಗುಲ್ಬರ್ಗಾ

ಗೋಗಿ ಯೋಜನೆ ಬಂದ್‌ಗೆ ಸ್ವಾಗತ

ಯಾದಗಿರಿ: ಶಹಾಪುರ ತಾಲೂಕಿನ ಗೋಗಿ ಯುರೇನಿಯಂ ಗಣಿಗಾರಿಕೆ ಯೋಜನೆ ಪ್ರಸ್ತಾವನೆಯನ್ನು ಕೈಬಿಟ್ಟಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಜಿಲ್ಲಾದ್ಯಂತ ವ್ಯಾಪಕ ಸ್ವಾಗತ ದೊರೆತಿದೆ. ಯೋಜನೆ ವಿರೋಧಿಸಿ ಹೋರಾಟದ ನೇತೃತ್ವ ವಹಿಸಿದ್ದ ಗೋಗಿಯ ಭೂಮಿ ತಾಯಿ ಉಳಿಸಿ ಹೋರಾಟ ಸಮಿತಿ ಶುಕ್ರವಾರ ಶಹಾಪುರದಲ್ಲಿ ವಿಜಯೋತ್ಸವ ಹಮ್ಮಿಕೊಂಡಿದೆ.
ಇದೇ ವೇಳೆ ಈ ಕುರಿತು ಗುರುವಾರ ವರದಿ ಪ್ರಕಟಿಸಿದ್ದ 'ಕನ್ನಡಪ್ರಭ'ದ ಬಗ್ಗೆಯೂ ಶ್ಲಾಘನೆ ವ್ಯಕ್ತವಾಗಿದೆ. ಯೋಜನೆ ವಿರೋಧಿಸುತ್ತಿದ್ದವರಿಗೆ ಸಂತಸದ ಸುದ್ದಿ ಹೊತ್ತು ತಂದ ಪತ್ರಿಕೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಇದು ಹೋರಾಟಕ್ಕೆ ಸಿಕ್ಕ ಜನವಾಗಿದ್ದು, ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯ ಗೋಗಿ ಯೋಜನೆಯ ಪ್ರಸ್ತಾವನೆಯನ್ನು ಕೈಬಿಟ್ಟಿರುವುದನ್ನು ಸ್ವಾಗತಿಸಿದ್ದಾರೆ.
ಇಂದು ವಿಜಯೋತ್ಸವ: ಯೋಜನೆಯನ್ನು ಶಾಶ್ವತವಾಗಿ ಬಂದ್ ಮಾಡಬೇಕು. ಆ ಕುರಿತು ಸರ್ಕಾರ ಅಧಿಕೃತವಾಗಿ ಪ್ರಕಟಿಸಬೇಕು ಎಂಬ ಧ್ವನಿ ಈಗ ಏಳುತ್ತಿದೆ. ಆದ್ದರಿಂದ ಈ ಎಲ್ಲ ವಿಷಯಗಳ ಕುರಿತು ಭೂಮಿ ತಾಯಿ ಉಳಿಸಿ ಹೋರಾಟ ಸಮಿತಿ ಪದಾಧಿಕಾರಿಗಳು ಸಭೆ ಕರೆದು ಚರ್ಚಿಸಿದ್ದು, ಫೆ.15ರಂದು ವಿಜಯೋತ್ಸವ ಆಚರಿಸಲು ನಿರ್ಧರಿಸಿದ್ದಾರೆ. ಜತೆಗೆ ಹೋರಾಟವನ್ನು ಇಲ್ಲಿಗೇ ಪೂರ್ಣಗೊಳಿಸದೇ ಮುಂದುವರಿಸುವ ಬಗ್ಗೆಯೂ ಚರ್ಚಿಸಿದ್ದಾರೆ. ಆದ್ದರಿಂದ ಶಹಾಪುರ ತಾಲೂಕಿನ ಗೋಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರ ಗುರುವಾರದ ಪ್ರಮುಖ ಮಾತೆಂದರೆ, 'ಗೋಗಿ ಮನೆಗೋಗಿ ಆಯ್ತಂತೆ ಅಲ್ಲವೇ' ಎಂದು.
ಯೋಜನೆ ವಿರೋಧಿಸಿದವರೇ ಹೆಚ್ಚು: ಗೋಗಿ ಯುರೇನಿಯಂ ಗಣಿಗಾರಿಕೆ ಯೋಜನೆಯನ್ನು ವಿರೋಧಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು ಒಂದು ವರ್ಷದ ಈಚೆಗೆ. ಪರಿಸರವಾದಿಗಳು ಹಾಗೂ ಮಾಧ್ಯಮಗಳಿಂದ ಜಾಗೃತರಾದ ಸ್ಥಳೀಯರು ಎಚ್ಚೆತ್ತುಕೊಂಡಿದ್ದರು. ಆಗ ಯೋಜನೆ ವಿರೋಧಿಸಲು ಹುಟ್ಟಿದ ಸಂಘಟನೆಯೇ ಭೂಮಿ ತಾಯಿ ಉಳಿಸಿ ಹೋರಾಟ ಸಮಿತಿ. ಸಮಿತಿ ಅಧ್ಯಕ್ಷ ಮಲ್ಲಣ್ಣ ಪರಿವಾಣ ಅವರ ನೇತೃತ್ವದಲ್ಲಿ ಯೋಜನೆ ವಿರೋಧಿ ಹೋರಾಟಗಳು ನಡೆದಿವೆ.
2012ರ ಜ.26ರಂದು ಗಣರಾಜ್ಯೋತ್ಸವವನ್ನು ಕರಾಳ ದಿನವೆಂದು ಆಚರಿಸಿದ್ದರು. ಇದು ಜೀವನದ ಅಳಿವು ಉಳಿವಿನ ಪ್ರಶ್ನೆ ಎಂದುಕೊಂಡು ಗೋಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಸ್ವಯಂಪ್ರೇರಿತರಾಗಿ ಬಂದ್ ನಡೆಸಿ, ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟಿಸಿದ್ದರು. ಸ್ಥಳೀಯ ಶಾಸಕ ಶರಣಬಸವಪ್ಪಗೌಡ ದರ್ಶನಾಪುರ ಅವರೂ ಪಾಲ್ಗೊಂಡು ಬೆಂಬಲ ಸೂಚಿಸಿದ್ದರು. ಈಗ ಅವರ ಹೋರಾಟಕ್ಕೆ ಬೆಲೆ ಸಿಕ್ಕಂತಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸ್ಟಿಂಗ್‌ ಆಪರೇಷನ್‌ ಪ್ರಕರಣ: ಮುಂದಿನ ನಿರ್ಧಾರ ಸಿಎಂ ಡಿಕೆ ಶಿವಕುಮಾರ್`ಗೆ ಬಿಟ್ಟ ಸಂಪುಟ, ಸಾಕ್ಷ್ಯಾಧಾರ ಮೇಲೆ ಮುಂದಿನ ಕ್ರಮ!

15 ವರ್ಷದ ಹಳೆ ವಿಡಿಯೋ ಅದಂತೆ, ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿಕೆ ಹರಿಪ್ರಸಾದ್ ಗರಂ

'ಕುಟುಂಬದ ಕನಸು ನನಸು': ‘ಜೈಲರ್ 2’ ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!

ನೀಲಿ ಡ್ರಮ್‌ ಪ್ರಕರಣ: ಮರಣದಂಡನೆ ಶಿಕ್ಷೆ ಪ್ರಕಟ ಬಳಿಕ ಊಟ-ನಿದ್ರೆ ಬಿಟ್ಟು ಕಂಗಾಲಾಗಿರುವ ಮುಸ್ಕಾನ್-ಸಾಹಿಲ್!

'ಬಲಿತ ದಲಿತ'ನೇ, ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು?: ಖರ್ಗೆ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ