ಗುಲ್ಬರ್ಗಾ

ಗುಲಾಬಿ ಹಿಡಿದು ಕಾಯಮಾತಿಗೆ ಆಗ್ರಹ

ಗುಲ್ಬರ್ಗ: ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡದಲ್ಲಿರುವ ರಾಜಶ್ರೀ ಸಿಮೆಂಟ್ ಕಾರ್ಖಾನೆಯಲ್ಲಿರುವ ಸುಮಾರು 1000 ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಿ ಕೇಂದ್ರ ಸರ್ಕಾರದ ನೀತಿಯಂತೆ ಸಿಮೆಂಟ್ ವೇಜ್ ಬೋರ್ಡ್ ವೇತನ ನೀಡುವಂತೆ ಒತ್ತಾಯಿಸಿ ಫೆ.19ರ ಮಂಗಳವಾರ ಶ್ರಮಜೀವಿಗಳ ವೇದಿಕೆಯ ಮುಖ್ಯಸ್ಥ ಚಂದ್ರಸೇಖರ ಹಿರೇಮಠ ನೇತೃತ್ವದ ಹೋರಾಟದಲ್ಲಿ ಕಾರ್ಮಿಕರು ಸಾವಿರಾರು ಸಂಖ್ಯೆಯಲ್ಲಿ ಸೇರಿ ಕೈಯಲ್ಲಿ ಗುಲಾಬಿ ಹೂವು ಹಿಡಿದು ಶಾಂತಿಯಿಂದ ಪ್ರತಿಭಟನೆ ನಡೆಸಿ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.
ಜಗತ್ ವೃತ್ತದಿಂದ ಸರ್ದಾರ್ ಪಟೇಲ್ ವೃತ್ತದವರೆಗೆ ನಡೆದ ಮೆರವಣಿಗೆಯಲ್ಲಿ ಸೇರಿದ್ದ ಕಾರ್ಮಿಕರೆಲ್ಲರೂ ಗುಲಾಬಿಯೊಂದಿಗೆ ಪ್ರತಿಭಟನೆ ನಡೆಸಿದ್ದು ವಿಶೇಷವಾಗಿತ್ತು. ಅಲ್ಲಿಂದ ಪ್ರಾ. ಆಯುಕ್ತರ ಕಚೇರಿಗೆ ಹೋಗಿ ಸೇಡಂ ಸಹಾಯಕ ಆಯುಕ್ತ ಡಿ.ಕೆ. ರವಿ ಸಲ್ಲಿಸಿರುವ ತನಿಖಾ ವರದಿಯ ಶಿಫಾರಸ್ಸುಗಳಂತೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಕಾರ್ಮಿಕರು ಗುಲ್ಬರ್ಗ ಜಿಲ್ಲಾಧಿಕಾರಿ ಮುಖಾಂತರ ಪ್ರಧಾನಿ ರಾಷ್ಟ್ರಪತಿಗಳು, ಸಿಎಂ, ಕಾರ್ಮಿಕ ಸಚಿವರಿಗೆ ಮನವಿ ಸಲ್ಲಿಸಿದರು.
ಕಾಯಂಗೊಳಿಸಿ: ರಾಜಶ್ರೀ ಸಿಮೆಂಟ್ ಕಾರ್ಖಾನೆಯಲ್ಲಿ ಕಳೆದ ಒಂದೂವರೆ ದಶಕದಿಂದ ಕೆಲಸದಲ್ಲಿರುವ ಗುತ್ತಿಗೆ ಕಾರ್ಮಿಕರು ಸಿಮೆಂಟ್ ಉತ್ಪಾದನೆಯಲ್ಲಿ ನಿರಂತರವಾಗಿ ಕೆಲಸದಲ್ಲಿದ್ದಾರೆ. ಗುತ್ತಿಗೆ ಕಾಯ್ದೆಯ ಅನ್ವಯ ಇವರನ್ನೆಲ್ಲ ಕಾಯಂಗೊಳಿಸಿ ಸಿಮೆಂಟ್ ವೇಜ್ ಬೋರ್ಡ್ ಮಂಡಳಿಯ ವೇತನ ಪಾವತಿಸುವಂತೆ ಕಾರ್ಮಿಕರು ಹೋರಾಟ ನಡೆಸುತ್ತಿದ್ದಾರೆ. ಆಡಳಿತ ಮಂಡಳಿ ಸುಳ್ಳು ಹೇಳಿಕೆ ನೀಡುತ್ತ ಹೋರಾಟ ಹತ್ತಿಕ್ಕುತ್ತಿದೆ ಎಂದು ಇದೇ ಸಂದರ್ಭದಲ್ಲಿ ವಿಕಾಸ ಭವನದ ಅಂಗಳದಲ್ಲಿ ಸೇರಿದ್ದ ಕಾರ್ಮಿಕರನ್ನು ಉದ್ದೇಶಿಸಿ ಮುಖಂಡ ಚಂದ್ರಶೇಖರ ಹಿರೇಮಠ ಮಾತನಾಡಿದರು.
ಭದ್ರತೆ: ಗುತ್ತಿಗೆ ಕಾರ್ಮಿಕರಿಗೆ ಸೇವೆ ಕಾಯಂ ಮಾಡುವ ಬೇಡಿಕೆಯ ಈಡೇರಿಕೆಯಲ್ಲಿ ಕಾರ್ಖಾನೆ ತಳೆಯುತ್ತಿರುವ ನಿಲುವುಗಳನ್ನು ಕಟುವಾಗಿ ಖಂಡಿಸಿದ ಹಿರೇಮಠ ನಮ್ಮ ಭಾಗದಲ್ಲಿದ್ದು, ಸಿಮೆಂಟ್ ಉತ್ಪಾದನೆಯಲ್ಲಿ ತೊಡಗಿರುವ ಕಾರ್ಖಾನೆಗಳಲ್ಲಿ ಸ್ಥಳೀಯವಾಗಿರುವ ಜನರಿಗೆ ಉದ್ಯೋಗ ಭದ್ರತೆ ಇರದಿರುವುದು ನ್ಯಾಯವೆ ಎಂದು ಪ್ರಶ್ನಿಸಿದರು.
ಪ್ರಾ. ಆಯುಕ್ತರು ಈ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡಿ, ಕಾರ್ಮಿಕರಿಗೆ ನ್ಯಾಯ ದೊರಕುವಂತೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಶ್ರಮಜೀವಿಗಳ ವೇದಿಕೆಯ ಅಧ್ಯಕ್ಷ ಚಂದ್ರಶೇಖರ ಹಿರೇಮಠ, ರಮಾಕಾಂತ ಕುಲ್ಕರ್ಮಿ, ರಾಜಶ್ರೀ ಸಿಮೆಂಟ್ ಕಾರ್ಖಾನೆಯ ಮರಿಯಪ್ಪ ಪೂಜಾರಿ, ದೇವೀಂದ್ರಪ್ಪ ಜಾಪೂರ, ಪ್ರಭುರಾವ, ಬಸವರಾಜ ಹಿರೇಮಠ, ರಾಜಕುಮಾರ, ಬಾನುದಾಸ, ಹಣಮಂತ ಯರಗಲ್, ಶಿವಶರಣ, ಮಲ್ಲಿಕಾರ್ಜುನ ಲಾಲಿ, ತಿಪ್ಪಣ್ಣ ತಳವಾರ, ಶರಣಪ್ಪ ಸಜ್ಜನ, ನಾಗಣ್ಣ ಕ್ಯಾಂಟೀನ್, ಬಾಗೋಡಿ ಕ್ಯಾಂಟೀನ್, ಬಸವರಾಜ ಕಂಬಾರ, ಮಹಿಳಾ ಕಾರ್ಮಿಕರಾದ ಗೋಬ್ರಿಬಾಯಿ, ವಿಜಯಲಕ್ಷ್ಮೀ, ಮಲ್ಲಮ್ಮ, ಶಿವಮ್ಮ, ಮಲ್ಲಮ್ಮ ಮಂಗ ಮತ್ತಿತರರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!