ಗುಲ್ಬರ್ಗಾ

'ಕೈ' ವೀಕ್ಷಕರ ಮುಂದೆ ಬಲ ಪ್ರದರ್ಶನ

ಚಿಂಚೋಳಿ: ಸ್ಥಳೀಯ ಪಟ್ಟಣ ಪಂಚಾಯತ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವ ಟಿಕೆಟ್ ಆಕಾಂಕ್ಷಿಗಳು ತಮಗೆ ಟಿಕೆಟ್ ನೀಡುವಂತೆ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ಕಾಂಗ್ರೆಸ್ ಪಕ್ಷದ ಚುನಾವಣಾ ವೀಕ್ಷಕರ ಮುಂದೆ ಬಲ ಮತ್ತು ಶಕ್ತಿ ಪ್ರದರ್ಶಿಸಿದರು.
ಪಟ್ಟಣದ ಪದ್ಮಾಕಾಲೇಜು ಅವರಣದಲ್ಲಿ ಗುರುವಾರ ಪಕ್ಷದ ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಸ್ವೀಕರಿಸಲು ಆಗಮಿಸಿದ ಜಿಲ್ಲಾ ಕಾಂಗ್ರೆಸ್ ಪಕ್ಷದ ಪಟ್ಟಣ ಪಂಚಾಯತ ಚುನಾವಣಾ ಉಸ್ತುವಾರಿಗಳಾದ ಮಲ್ಲಿನಾಥ ಪಾಟೀಲ್ ಮತ್ತು ಭೀಮರಾವ ತೇಗಲತಿಪ್ಪಿ ಮಾಜಿ ಸಚಿವ ಬಾಬುರಾವ ಚವ್ಹಾಣ, ಡಾ. ಉಮೇಶ ಜಾಧ್, ಶಾಮರಾವ ರಾಠೋಡ್ ಮುಂತಾದವರಿಗೆ ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿ ತಮ್ಮ ಟಿಕೆಟ್ ನೀಡುವಂತೆ ಮನವಿಗಳು ಸಲ್ಲಿಸಿದರು.
ಚುನಾವಣೆಯಲ್ಲಿ ಯುವಕರಿಗೆ ಮೊದಲ ಆದ್ಯತೆ ನೀಡಬೇಕು. ಹಳೆ ಕಾರ್ಯಕರ್ತರಿಗೆ ಮತ್ತು ಮೊದಲು ಸ್ಪರ್ಧಿಸಿದ ಅಭ್ಯರ್ಥಿಗಳಿಗೆ, ಗೆಲುವು ಸಾಧಿಸಿದವರಿಗೆ ಪುನಃ ಟಿಕೆಟ್ ನೀಡಬಾರದು. ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡಿದರೆ ಚುನಾವಣೆಯಲ್ಲಿ ಗೆಲುವು ಖಚಿತ. ಕೆಲವು ಪಕ್ಷಾಂತರಿಗಳು ಜೆಡಿಎಸ್, ಬಿಜೆಪಿ, ಕೆಜೆಪಿ, ಬಿಎಸ್‌ಆರ್ ಪಕ್ಷದಲ್ಲಿಯೂ ಅರ್ಜಿ ಸಲ್ಲಿಸಿದ್ದಾರೆ. ಅಂತಹವರಿಗೆ ಟಿಕೆಟ್ ನೀಡಬಾರದೆಂದು ಕೆಲವು ಕಾಂಗ್ರೆಸ್ ಯುವ ಕಾರ್ಯಕರ್ತರು ಚುನಾವಣಾ ವೀಕ್ಷಕರ ಗಮನಕ್ಕೆ ತಂದರು.
ಚಂದಾಪುರ ನಗರದ ರಾಧಾಕೃಷ್ಣ ಕಟ್ಟಿ, ರಾಮಶೆಟ್ಟಿ ಪವಾರ, ಅಬ್ದುಲ್ ಸೀತ್, ನಾಗಮಣಿಗರಪಳ್ಳಿ, ಖಾಜಾಬೇಗಂ, ಸೋಮಶೇಖರ ಭೂಶಟ್ಟಿ, ಶ್ರೀನಿವಾಸ ಘಾಲಿ, ಶಾಮರಾವ ಕೊರವಿ, ಖಾಜಾ ಮೈನೋದ್ದೀನ್, ಉಮಾ ಪಾಟೀಲ್, ಖೀರು ಪವಾರ, ರಾಜು ರಾಠೋಡ್, ನರಸಮ್ಮ ಗಂಗನಪಳ್ಳಿ, ಅರ್ಜಿ ಸಲ್ಲಿಸಿದವರಲ್ಲಿ ಪ್ರಮುಖರಾಗಿದ್ದಾರೆ. ಸ್ಥಳೀಯ ಪಟ್ಟಣ ಪಂಚಾಯತ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಒಟ್ಟು 54 ಆಕಾಂಕ್ಷಿಗಳು ಅರ್ಜಿಗಳನ್ನು ಸಲ್ಲಿಸಿದ್ದಾರೆಂದು ಚುನಾವಣಾ ವೀಕ್ಷಕರಾದ ಮಲ್ಲಿನಾಥ ಪಾಟೀಲ್, ಭೀಮರಾವ ತೇಗಲತಿಪ್ಪಿ ತಿಳಿಸಿದ್ದಾರೆ.
ಕಳೆದ 2007ರ ಪಪಂ ಚುನಾವಣೆಯಲ್ಲಿ 18 ಸ್ಥಾನಗಳ ಪೈಕಿ 10 ಸ್ಥಾನಗಳಲ್ಲಿ ಕಾಂಗ್ರೆಸ್ ಜಯ ಗಳಿಸಿ ಅಧಿಕಾರ ಪಡೆದಿತ್ತು. ಹೀಗಾಗಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ ಎಂದು ತಾಪಂ ಮಾಜಿ ಅಧ್ಯಕ್ಷ ಕಾಂಗ್ರೆಸ್ ಮುಖಂಡ ಶಾಮರಾವ ರಾಠೋಡ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!