ಗುಲ್ಬರ್ಗ: ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಗುಲ್ಬರ್ಗ ಸ್ನಾತಕೋತ್ತರ ಕೇಂದ್ರ ಸರ್ಕಾರಿ ಕಾಲೇಜಿನ ಸಹ ಪ್ರಾಧ್ಯಾಪಕ ಮತ್ತು ಸಂಶೋಧನಾ ಮಾರ್ಗದರ್ಶಕ ಡಾ. ಶರಣಪ್ಪ ಎಸ್. ಮಾಳಗಿ ಅವರ 'ಅರಿವಿನ ಹಂದರ-ಜಂಬಗಿ ಶರಣರು' ಎಂಬ ಕೃತಿಗೆ ಕರ್ನಾಟಕ ರಾಜ್ಯ ದಲಿತ ಸಾಹಿತ್ಯ ಪರಿಷತ್ತು ಉತ್ತಮ ದಲಿತ ಕೃತಿ ಎಂಬ ಪುಸ್ತಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸರ್ಕಾರಿ ಕಾಲೇಜನ ಪ್ರಾಂಶುಪಾಲ ಪ್ರೊ. ಮುಜಾದದಿ, ಬೋಧಕ- ಬೋಧಕೇತರ ವರ್ಗ, ವಿದ್ಯಾರ್ಥಿ-ಸಂಶೋಧನಾ ವಿದ್ಯಾರ್ಥಿ ಬಳಗ, ದಲಿತ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಡಾ. ಸೂರ್ಯಕಾಂತ ಸುಜ್ಯಾತ ಮತ್ತು ಕಾರ್ಯಕಾರಿ ಮಂಡಳಿಯ ಪದಾಧಿಕಾರಿಗಳು, ಕರ್ನಾಟಕ ರಾಜ್ಯ ಪದವಿ ಕಾಲೇಜು(ಪ.ಜಾ, ಪ.ಪಂ) ಉಪನ್ಯಾಸಕರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ. ಸಂಗಪ್ಪ ಹೊಸಮನಿ ಮತ್ತು ಕಾರ್ಯಕಾರಿ ಮಂಡಳಿಯ ಸದಸ್ಯರು, ಮಹಾನಗರದ ಬಿಜೆಪಿ ಸ್ಲಂ ಮೋರ್ಚಾ ಅಧ್ಯಕ್ಷ ಬಾಬುರಾವ್ ಎಸ್. ಮಾಳಗಿ, ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ಗುಲ್ಬರ್ಗ ಗ್ರಾಮೀಣ ಕ್ಷೇತ್ರದ ಅಧ್ಯಕ್ಷ ರವೀಂದ್ರ ಬೆಳಮಗಿ ಅಭಿನಂದಿಸಿದ್ದಾರೆ.