ಗುಲ್ಬರ್ಗಾ

ಕನಕದಾಸರ ಜಯಂತ್ಯುತ್ಸವ

ಜೇವರ್ಗಿ: ವಿಶ್ವ ಮಾನವ ಕನಕದಾಸರರು ತಮ್ಮ ದಾಸ ಸಾಹಿತ್ಯದ ಮೂಲಕ ಜನರನ್ನು ಜಾಗೃತಗೊಳಿಸಿದ ನಾಡಿನ ಯುಗ ಪುರುಷರಲ್ಲಿ ಒಬ್ಬರು. ಅವರು ಬೋಧಿಸಿದ ತತ್ವಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಹೇಳಿದರು.
ತಾಲೂಕಿನ ಕೊಡಚಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ದಾಸರ 525ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶಿಕ್ಷಣದಿಂದ ಮಾತ್ರ ಈ ಸಮಾಜ ಅಭಿವೃದ್ಧಿಹೊಂದಲು ಸಾದ್ಯ. ಆದ್ದರಿಂದ ಇಂದಿನ ವೈಜ್ಞಾನಿಕ ಪೈಪೋಟಿಯ ದಿನಗಳಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವ ಅವಶ್ಯಕತೆಯಿದೆ ಎಂದರು. ಹಾಲಿನಂತ ಈ ಸಮಾಜ ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಮುಂದೆ ಬರಬೇಕು. ರಾಜ್ಯ ಬಿಜೆಪಿ ಸರ್ಕಾರ ಹಿಂದುಳಿದ ವರ್ಗದವರ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ 1000 ಕೋಟಿ ಅನುದಾನ ಮೀಸಲಿರಿಸಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು. ಈ ಗ್ರಾಮದ ಕನಕದಾಸರ ಭವನಕ್ಕೆ 4 ಲಕ್ಷ ಅನುದಾನ ನೀಡುವ ಭರವಸೆ ನೀಡಿದರು.
ಕನಕ ಗುರು ಪೀಠದ ಸಿದ್ದರಾಮಾನಂದಪುರಿ ಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಪರಿಮಳನ್, ಬಿಎಸ್‌ಆರ್ ಮುಖಂಡ ಬೈಲಪ್ಪ ನೆಲೋಗಿ, ಅಶೋಕ ಸಾಹು ಗೋಗಿ, ಚನ್ನಮಲ್ಲಯ್ಯ ಹಿರೇಮಠ, ತಿಪ್ಪಣ್ಣ ಕನಕ, ತಿಪ್ಪಣ್ಣ ಗುಂಡಗುರ್ತಿ ಆಗಮಿಸಿದ್ದರು. ಪದ್ಮರಾಜ ರಾಸಣಗಿ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ದೇವರಾಜ ಅರಸ್ ಪ್ರಶಸ್ತಿ ಪುರಸ್ಕೃತರಾದ ಬಸವಣ್ಣಪ್ಪ ಗೌನಳ್ಳಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಾನಪ್ಪ ಪೂಜಾರಿ, ಈರಣ್ಣ ಜಂಗಳಿ, ನಿಂಗಣ್ಣ ರದ್ದೇವಾಡಗಿ, ಸಿದ್ದಣ್ಣ ಹಾಲಗಡ್ಲಿ, ಚಂದ್ರಶೇಖರ ನೇರಡಗಿ, ಶಿವು ಎಸ್. ಪೂಜಾರಿ, ವಿಜಯಕುಮಾರ ಜಂಗಳಿ, ರುದ್ರಗೌಡ ಹಿರೇಗೌಡ, ಶರಣಪ್ಪ ಹಂದ್ರಾಳ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು. ಮಾನಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಮಾಳಪ್ಪ ಪೂಜಾರಿ ಸ್ವಾಗತಿಸಿ, ಎಸ್.ಎಸ್. ಮಾಲಿಬಿರಾದಾರ ನಿರೂಪಿಸಿದರು. ಈರಣ್ಣ ಪೂಜಾರಿ ವಂದಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!