ಗುಲ್ಬರ್ಗಾ

ಸಾಧನೆ ಪುಸ್ತಕ ಲೋಕಾರ್ಪಣೆ

ಚಿತ್ತಾಪುರ: ಪುಸ್ತಕಗಳು ಸ್ನೇಹಿತರಿದ್ದಂತೆ. ಜತೆಗೆ ಬದುಕು ರೂಪಿಸಲು ಪುಸ್ತಕಗಳು ಜ್ಞಾನದ ಕೀಲಿ ಕೈಯಾಗಿವೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಅಪ್ಪಾರಾವ ಅಕ್ಕೋಣಿ ಹೇಳಿದರು.
 ಪಟ್ಟಣದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಫ್ರೆಂಡ್ಸ್ ಯುಥ ಕ್ಲಬ್ ಸಂಯುಂಕ್ತಾಶ್ರಯದಲ್ಲಿ ಹಮ್ಮಿಕೊಂಡ ಲೇಖಕ ಹಾಗೂ ನಿವೃತ್ತ ಶಿಕ್ಷಕ ವೀರಯ್ಯಸ್ವಾಮಿ ಸ್ಥಾವರಮಠ ಅವರ ಸಾಧನೆ ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿ, ಪುಸ್ತಕಗಳಲ್ಲಿನ ಸಾಹಿತ್ಯಗಳು ಮನುಷ್ಯನಿಗೆ ಬದುಕು ಕಲಿಸುವ ಶಕ್ತಿ ಅಡಗಿರುತ್ತದೆ ಎಂದರು.
 ಕಸಾಪ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ ಮಾತನಾಡಿ, ಗುಣಮಟ್ಟದ ಸಾಹಿತ್ಯ ಬರವಣಿಗೆಯಿಂದ ಉತ್ತಮ ಲೇಖಕನಾಗಲು ಸಾಧ್ಯ. ಚಿತ್ತಾಪುರದಲ್ಲಿ 2 ತಿಂಗಳೊಳಗೆ ಕಸಾಪ ತಾಲೂಕು ಸಮ್ಮೇಳನ ಮಾಡಲಾಗುವುದು ಎಂದು ಭರವಸೆ ನೀಡಿದರು.
 ಸಾನ್ನಿಧ್ಯ ವಹಿಸಿದ್ದ ರಾವೂರ ಸಿದ್ಧಲಿಂಗ ಮಹಾಸ್ವಾಮೀಜಿ, ಸಾಹಿತಿ ಸಂಶೋಧಕ ಗುಂಡೇರಾವ ಮುಡಬಿ, ವಿಶ್ವಜ್ಯೋತಿ ಪ್ರತಿಷ್ಠಾನ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಗುಲ್ಬರ್ಗದ ಇಂದುಮತಿ ಪಾಟೀಲ್, ಲೇಖಕ ವೀರಯ್ಯ ಸ್ವಾಮಿ ಸ್ಥಾವರಮಠ ಮಾತನಾಡಿದರು.
 ಪುರಸಭೆ ಮಾಜಿ ಅಧ್ಯಕ್ಷ ನಾಗರಾಜ ಭಂಕಲಗಿ, ಉದ್ದಿಮೆದಾರ ವಿನೋದ ಗುತ್ತೇದಾರ, ಮುಖ್ಯಗುರು ಲಿಂಗಣ್ಣ ಮಲ್ಕನ ಉಪಸ್ಥಿತರಿದ್ದರು. ಕಸಾಪ ಅಧ್ಯಕ್ಷ ನಾಗಯ್ಯಸ್ವಾಮಿ ಅಲ್ಲೂರ್ ಅಧ್ಯಕ್ಷತೆ ವಹಿಸಿದ್ದರು.
  ವೀರಸಂಗಪ್ಪ ಸುಲೇಗಾಂವ ಪ್ರಾಸ್ತಾವಿಕ ಮಾತನಾಡಿದರು. ಸಾಗರ ಸ್ಥಾವರಮಠ ಸ್ವಾಗತಿಸಿದರು. ಶಿವಲೀಲಾ ಮಠಪತಿ ನಿರೂಪಿಸಿದರು. ಪ್ರೇಮಕುಮಾರ ವಂದಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಬಲಿತ ದಲಿತ'ನೇ, ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು?: ಖರ್ಗೆ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ

ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿ ಅ.16ರ CJPಯ ಪ್ರತಿಭಟನೆಗೆ ತಡೆ ನೀಡಲು ಹೈಕೋರ್ಟ್ ನಕಾರ!

ಕಾಕ್ರೋಚ್ ಜನತಾ ಪಾರ್ಟಿ, ಕಾಂಗ್ರೆಸ್ ಎರಡೂ ಒಂದೇ; ಇಲ್ಲಿ ನಿಮ್ಮನ್ನು ಯಾರೂ ಬಂಧಿಸಲ್ಲ: ಪ್ರಿಯಾಂಕ್ ಖರ್ಗೆ ಸ್ಫೋಟಕ ಹೇಳಿಕೆ!

ಪೊಲೀಸ್ ಕಮಿಷನರ್ ಕಚೇರಿ ಮುಂದೆ HDK ಧರಣಿ: ಸ್ಟಿಂಗ್‌ ರೂವಾರಿಯ ಬಂಧನಕ್ಕೆ ಆಗ್ರಹ; ಎರಡು ದಿನಗಳ ಡೆಡ್‌ಲೈನ್‌!

Indian Stock Market: ಕೊನೆಗೂ ಪುಟಿದಿದ್ದ ಭಾರತೀಯ ಷೇರು ಮಾರುಕಟ್ಟೆ, ಸೆನ್ಸೆಕ್ಸ್ ದಾಖಲೆಯ ಏರಿಕೆ