ಚಿಂಚೋಳಿ: ಕ್ರಾಂತಿಕಾರಿ ಬಸವಣ್ಣನವರು ಮೂಢನಂಬಿಕೆಯನ್ನು ವಿರೋಧಿಸಿ ಕಲ್ಲು ನಾಗರನಿಗೆ ಹಾಲೆರೆಯುವ ಬದಲಾಗಿ ಸಮಾಜದ ಜೀವಿಗಳಿಗೆ ಆಹಾರ ನೀಡಲು ತಮ್ಮ ವಚನಗಳ ಮೂಲಕ ಜನರನ್ನು ಜಾಗೃತಗೊಳಿಸಿದರು. ಮಹಾ ಮಾನವತಾವಾದವನ್ನು ಪ್ರತಿಪಾದಿಸಿದರು ಎಂದು ಪದ್ಮಾ ಕಾಲೇಜಿನ ಇತಿಹಾಸ ಉಪನ್ಯಾಸ ಶಾಂತವೀರ ಹೀರಾಪೂರ ಹೇಳಿದರು.
ತಾಲೂಕು ಲಿಂಗವಂತ ಧರ್ಮತತ್ವ ಪ್ರಚಾರ ಸಂಸ್ಥೆ ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆ ಹಾಗೂ ಯುವ ವೇದಿಕೆ ಹಮ್ಮಿಕೊಂಡ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಾಲು ಹಣ್ಣು ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಸವ ಪಂಚಮಿ ಆಚರಣೆ ಏಕೆ?: ಹುತ್ತಕ್ಕೆ ಹಾಲೆರೆಯುವ ಬದಲಾಗಿ ಭೂಮಿ ಮೇಲೆ ಜೀವಂತವಾಗಿರುವ ಜೀವಿಗಳಿಗೆ ಹಾಲು ಕುಡಿಸಿದರೆ ಒಳ್ಳೆಯದು. ಬಸವಣ್ಣನವರು ಮೂಢನಂಬಿಕೆಯನ್ನು ಅತ್ಯಂತ ಕಟುವಾಗಿ ವಿರೋಧಿಸಿದರು. ಪಂಚಮಿಯಂದು ಬಸವಣ್ಣನವರು ಕೂಡಲಸಂಗಮದಲ್ಲಿ ಐಕ್ಯವಾಗಿರುವುದರಿಂದ ಈ ಹಬ್ಬವನ್ನು ವೀರಶೈವರು ಬಸವ ಪಂಚಮಿ ಆಚರಿಸಲಾಗುತ್ತಿದೆ ಎಂದು ಉಪನ್ಯಾಸಕ ಶಾಂತವೀರ ಹೀರಾಪೂರ ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕು ವೀರಶೈವ ಮಹಾಸಭೆ ಅಧ್ಯಕ್ಷ ವಿಶ್ವನಾಥ ಪಾಟೀಲ್, ಗೌತಮ್ ಪಾಟೀಲ್, ಕೆ.ಎಂ. ಬಾರಿ ಮುಂತಾದವರು ಮಾತನಾಡಿದರು. ಶಾಮರಾವ ಕೋರವಾರ, ಅಜೀತ ಪಾಟೀಲ್, ಶಿವನಾಗಯ್ಯ ಸ್ವಾಮಿ ವೇದಿಕೆಯಲ್ಲಿದ್ದರು. ರೇವಣಸಿದ್ದಯ್ಯಸ್ವಾಮಿ ನರನಾಳ ಸ್ವಾಗತಿಸಿದರು. ಪ್ರೊ. ಮಲ್ಲಿಕಾರ್ಜುನ ಪಾಲಾಮುರ ನಿರೂಪಿಸಿದರು. ರಮೇಶ ಸೀಳಿನ್ ವಂದಿಸಿದರು.
ಕಾಶಿನಾಥ ಹುಣಜೆ, ಶಕುಂತಲಾ ಸೂರ್ಯಕಾಂತ ಹುಲಿ, ಸಂತೋಷ ಗಡಂತಿ, ಸಂತೋಷ ಕಡಗದ, ಸಂತೋಷ ಸೀಳಿನ್ ಇನ್ನಿತರರು ಭಾಗವಹಿಸಿದ್ರು. ನಂತರ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಾಲು ಹಣ್ಣು ವಿತರಿಸಲಾಯಿತು.