ಗುಲ್ಬರ್ಗಾ

ಮಾರುಕಟ್ಟೆ ಹೊಸ ನೀತಿಗೆ ವಿರೋಧ

ಶೇಷಮೂರ್ತಿ ಅವಧಾನಿ
ಗುಲ್ಬರ್ಗ: ಈಗಾಗಲೇ ಕರ್ನಾಟಕ ಕೃಷಿ ಉತ್ಪನ್ನ ಮಾರಾಟ(ನಿಯಂತ್ರಣ ಮತ್ತು ಅಭಿವೃದ್ಧಿ) ಶಾಸನ 1966ನ್ನು ತಿದ್ದುಪಡಿ ಮಾಡಿ ಮಾರುಕಟ್ಟೆ ಪರವಾನಗಿ ನೀಡುವುದು, ಇ-ಟೆಂಡರಿಂಗ್ ಸೇರಿದಂತೆ ಹಲವು ಹಂತಗಳಲ್ಲಿ ಹೊಸತನ ತರಲಾಗುತ್ತದೆಂದು ಸರ್ಕಾರ ಅನುಷ್ಠಾನಕ್ಕೆ ತರಲು ಮುಂದಾಗಿರುವ ನೂತನ ಮಾರುಕಟ್ಟೆ ನೀತಿಗೆ ಇದೀಗ ಭಾರಿ ವಿರೋಧ ವ್ಯಕ್ತವಾಗುತ್ತಿದೆ.
ಈಗಾಗಲೇ ಚಾಮರಾಜನಗರ, ತಿಪಟೂರು ಹಾಗೂ ಅರಸಿಕೆರೆ ಎಪಿಎಂಸಿಗಳಲ್ಲಿ ಅನುಷ್ಠಾನಗೊಂಡಿರುವ ಮಾರುಕಟ್ಟೆ ಹೊಸ ನೀತಿಯನ್ನು ಜು.10ರಿಂದ ಗುಲ್ಬರ್ಗ, ಬೀದರ್, ಯಾದಗಿರಿ, ಚಿತ್ರದುರ್ಗ, ಬಿಜಾಪುರ, ಗದಗ, ತುಮಕೂರು, ಬೆಳಗಾವಿ, ಸೇಡಂ ಮತ್ತು ಚಳ್ಳಕೆರೆ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಅನುಷ್ಠಾನಕ್ಕೆ ಸರ್ಕಾರ ಮುಂದಾಗಿದೆ.
ಈ ಹತ್ತು ಎಪಿಎಂಸಿಗಳಡಿಯಲ್ಲಿರುವ ವರ್ತಕರು, ದಲ್ಲಾಳಿಗಳು(ಕಮೀಷನ್ ಏಜೆಂಟ್), ಪ್ರೊಸೆಸಿಂಗ್ ಘಟಕಗಳ(ದಾಲ್ಮಿಲ್ ಇತ್ಯಾದಿ) ಮಾಲೀಕರಿಗೆಲ್ಲರಿಗೂ ಹಳೆಯ ಪರವಾನಗಿ ಪತ್ರ ಸರ್ಕಾರಕ್ಕೆ ಮರಳಿಸಿ ಹೊಸ ಕಾಯ್ದೆಯಂತೆ ಪರವಾನಗಿ ಪತ್ರ ಹೊಂದಲು ಸೂಚಿಸಿದೆ.
ಹೊಸ ಮಾರುಕಟ್ಟೆ ನೀತಿಯಿಂದ ಈಗಿರುವ ಪರಂಪರಾಗತ ಎಪಿಎಂಸಿ ವ್ಯವಸ್ಥೆ ನೆಲಕಚ್ಚಲಿದೆ ಎಂದು ಮೊದಲಿನಿಂದಲೂ ಗಟ್ಟಿ ನಿಲುವು ತಾಳಿರುವ ರೈತರು, ಆಹಾರಧಾನ್ಯ- ಬೀಜ ವರ್ತಕರೆಲ್ಲರೂ ಸರ್ಕಾರದ ಸೂಚನಾ ಪತ್ರ ಕಂಡವರೇ ಸಂಘಟಿತರಾಗಿದ್ದಾರೆ. ಈಗಿರೋ ಪರವಾನಗಿ ಮರಳಿಸೋದಿಲ್ಲ, ಹೊಸ ಪರವಾನಗಿ ಪಡೆಯೋದಿಲ್ಲ ಎಂದು ಹೋರಾಟಕ್ಕೆ ಮುಂದಾಗಿದ್ದಾರೆ. ಈ ಬೆಳವಣಿಗೆ ಬರುವ ದಿನಗಳಲ್ಲಿ ಎಪಿಎಂಸಿ ಅಂಗಳದಲ್ಲಿ ಬಿರುಗಾಳಿ ಎಬ್ಬಿಸುವ ಸಾಧ್ಯತೆಗಳಿವೆ.
ಎಂಎನ್ಸಿಗಳಿಗೆ ರತ್ನಗಂಬಳಿ ಎನ್ನುತ್ತಾರೆ ರೈತರು: ಹೊಸ ಮಾರುಕಟ್ಟೆ ನೀತಿ-2013 ಜಾರಿಗೊಂಡಲ್ಲಿ ರೈತರಿಗೆ, ಈಗಿರುವ ವರ್ತಕ ಸಮೂಹಕ್ಕೆ ಮರಣ ದಂಡನೆ, ಬಹುರಾಷ್ಟ್ರೀಯ ಕಂಪನಿಗಳಿಗೆ ರತ್ನಗಂಬಳಿ ಹಾಕಿ ಸ್ವಾಗತಿಸಿದಂತೆ ಎನ್ನುತ್ತಾರೆ ವರ್ತಕರು.
ಎಪಿಎಂಸಿ ಕಾಯ್ದೆ ರೈತರು-ವರ್ತಕ ಸ್ನೇಹಿಯಾಗಿದ್ದರೂ ಯಾಕೆ ಸರ್ಕಾರ ಹೊಸ ನೀತಿ ಬೇಕೆನ್ನುತ್ತಿದೆಯೋ ಖಾಸಗಿ ಮಾರುಕಟ್ಟೆ ಸ್ಥಾಪನೆ ಇರಾದೆ ಇದೆ. ಪರಂಪರಾಗತ ಮಾರುಕಟ್ಟೆಯಲ್ಲಿ ವರ್ತಕರು, ರೈತರು, ದಲ್ಲಾಳಿಗಳು, ಹಮಾಲರು, ಅವರ ಅವರ ಕುಟುಂಬಗಳೆಲ್ಲರೂ ಬದುಕುತ್ತಿರುವಾಗ ಇ-ಮಾರ್ಕೆಟಿಂಗ್ ಎಂದು ಕಾಣದ ದಲ್ಲಾಳಿಗಳು, ಮಾರುಕಟ್ಟೆ ಹುಟ್ಟುಹಾಕುತ್ತಿರುದ್ಯಾಕೆ?
ವರ್ತಕರು- ರೈತರು ನೀತಿ ವಿರೋಧಿಸುತ್ತಿರೋದ್ಯಾಕೆ?
ಈಗಿರುವ ಎಪಿಎಂಸಿ ವ್ಯವಸ್ಥೆಯಲ್ಲಿ ದಲ್ಲಾಳಿಗಳಿಗೆ, ವರ್ತಕರಿಗೆ ಹಾಗೂ ಪ್ರೋಸೆಸಿಂಗ್ ಘಟಕಗಳಿರುವವರಿಗೆ ಪ್ರತ್ಯೇಕ ಲೈಸನ್ಸ್ ವ್ಯವಸ್ಥೆ ಇದೆ. ಆದರೆ ಹೊಸ ನೀತಿಯಡಿಯಲ್ಲಿ ಮೂರನ್ನೂ ಒಂದೇ ಪರವಾನಗಿ ವ್ಯವಸ್ಥೆಯಲ್ಲಿ ತರಲಾಗುತ್ತಿದೆ. ಹಳೆ ಕಾಯ್ದೆಯಂತೆ ಸ್ಥಳೀಯವಾಗಿ ನೋಂದಣಿಯಾದ ವರ್ತಕರೆಲ್ಲರೂ ಎಪಿಎಂಸಿ ವಹಿವಾಟಲ್ಲಿರುತ್ತಿದ್ದರು. ಹೊಸ ನೀತಿಯಂತೆ ಇ- ಪ್ರೊಕ್ಯೂರ್ಮೆಂಟ್ನಲ್ಲಿ ಭಾಗವಹಿಸಬೇಕು. ಅದಕ್ಕಾಗಿ ಮಾರುಕಟ್ಟೆ ಶುಲ್ಕ ರೂಪದಲ್ಲಿ 1 ಲಕ್ಷ(ಮೊದಲು 5 ಸಾವಿರ ಇತ್ತು) ನೀಡಬೇಕು. ಮಾರುಕಟ್ಟೆಗೆ ಬರುವ ಧಾನ್ಯಗಳ ಗ್ರೇಡಿಂಗ್ ನಡೆಯುತ್ತದೆ. ಇದನ್ನು ನಿರ್ವಹಿಸುವವರು ಖಾಸಗಿ ಸಂಸ್ಥೆಯವರು. ಅವರಿಗೆ ಶುಲ್ಕ ಸಂದಾಯ ಮಾಡಬೇಕು. ಇ-ಪ್ರೊಕ್ಯೂರ್ಮೆಂಟ್ನಲ್ಲಿ ಭಾಗವಹಿಸಿದಾಗ ಎಲ್ಲೋ ಇರುವ ವರ್ತಕ ಮಾಲು ನಮೂದಿತ ಗ್ರೇಡ್ ಹೊಂದಿಲ್ಲ ಎಂದು ತಕರಾರು ಮಾಡಿದರೆ ಇಲ್ಲಿ ಮಾರಾಟ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದವರು ಪರೇಶಾನ್ ಆಗಲೇಬೇಕು. ಜಗಳವಾದಲ್ಲಿ ವರ್ತಕ ಎಲ್ಲಿರುವನೋ ಅಲ್ಲಿಗೆ ಹೋಗಿ ಮೊಕದ್ದಮೆ ಹೂಡಬೇಕಂತೆ. ಮೊದಲೆಲ್ಲ ಇ-ಪ್ರೊಕ್ಯೂರ್ಮೆಂಟ್ ಇದ್ದರೂ ಸಹ ವರ್ತಕರು ಸ್ಥಳೀಯವಾಗಿ ನೋಂದಣಿ ಮಾಡಿಕೊಂಡು ಸ್ಥಳೀಯವಾಗಿಯೇ ವಹಿವಾಟಿಗೆ ಮುಂದಾಗುತ್ತಿದ್ದರು. ಚೊಕ್ಕ ವಹಿವಾಟು ಮಾಡುತ್ತ ನೆಮ್ಮದಿಯಿಂದ ಇದ್ದೆವು. ಹೊಸ ನೀತಿಯಿಂದಾಗಿ ಎಲ್ಲಿ ಫಜೀತಿಗೊಳಗಾಗುತ್ತೇವೋ ಎಂಬ ಭೀತಿ ಕಾಡುತ್ತಿದೆ ಎಂದು ವರ್ತಕರು- ರೈತರು ಹೇಳುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!