ಗುಲ್ಬರ್ಗಾ

ಆರೋಗ್ಯ ಭಾಗ್ಯಕ್ಕೆ ಆಯುರ್ವೇದ ಸಂಜೀವಿನಿ

ಶಹಾಪುರ: ಆರೋಗ್ಯ ಭಾಗ್ಯಕ್ಕೆ ಆಯುರ್ವೇದ ದಿವ್ಯೌಷಧವಾಗಿದ್ದು ಜನತೆ ಅಡ್ಡಿ ಆತಂಕಗಳಿಲ್ಲದೆ ದೇಹ ಸ್ವಾಸ್ಥ್ಯಕ್ಕೆ ಆಯುರ್ವೇದದ ಮೂಲಕ ಪರಿಣಾಮಕಾರಿ ಚಿಕಿತ್ಸೆ ಪಡೆಯಬಹುದು ಎಂದು ಶಾಸಕ ಗುರುಪಾಟೀಲ ಶಿರವಾಳ ತಿಳಿಸಿದರು.
ಜಿಪಂ, ಆಯುಷ್ ಇಲಾಖೆ ಆಶ್ರಯದಲ್ಲಿ ಬಿಆರ್‌ಜಿಎಫ್ ಯೋಜನೆಯಡಿ ಸಂಧಿವಾತ, ಶ್ವಾಸಕೋಶ, ಆಮ್ಲಪಿತ್ತ ಮತ್ತು ಉದರಕ್ಕೆ ಸಂಬಂಧಪಟ್ಟ ರೋಗಗಳಿಗೆ ಸಂಬಂಧಿಸಿ ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಗತ್ಯಕ್ಕಿಂತ ಹೆಚ್ಚು ಆಲೋಪಥಿಕ್ ಔಷಧ ಸೇವನೆ ಮಾಡುವ ಬದಲು ಮನೆಯ ಆಹಾರ ಪದಾರ್ಥದಲ್ಲೇ ದೊರಕುವ ಔಷಧ ಗುಣದ ಆಯುರ್ವೇದ ಔಷಧ ಸೇವಿಸಿ ಆರೋಗ್ಯ ರಕ್ಷಿಸಿಕೊಳ್ಳಬೇಕು. ಸರ್ಕಾರದ ಉಚಿತ  ಶಿಬಿರಗಳ ಸದುಪಯೋಗ ಪಡೆಯಬೇಕೆಂದು ಹೇಳಿದರು.
ಸರ್ಕಾರ ಪ್ರೋತ್ಸಾಹಿಸಲಿ: ಆಯುರ್ವೇದ ವೈದ್ಯರಾದ ಎ.ಡಿ. ಗಂಗನಾಳ ಮಾತನಾಡಿ, ಗಿಡಮೂಲಿಕೆಗಳಿಂದ ಲಭ್ಯವಾಗುವ ಆಯುರ್ವೇದಿಕ್ ಔಷಧ ಸ್ವಾಸ್ಥ್ಯ ರಕ್ಷಣೆಗೆ ಪೂರಕವಾಗಿದ್ದು, ಸರ್ವರು ಹೆಚ್ಚೆಚ್ಚು ಇದರ ಉಪಯೋಗ ಪಡೆಯಬೇಕು. ಆಯುರ್ವೇದ ಪದ್ಧತಿ ಅಧಿಕ ಬಳಕೆಯಾಗಲು ಸರ್ಕಾರ ಸೂಕ್ತ ಪ್ರೋತ್ಸಾಹ ನೀಡಬೇಕು. ಈ ದಿಸೆಯಲ್ಲಿ ಸ್ಥಳೀಯ ಶಾಸಕರು ಹೆಚ್ಚು ಪ್ರಯತ್ನಿಸಬೇಕೆಂದು ಮನವಿ ಮಾಡಿದರು. ಜಿಪಂ ಸದಸ್ಯರಾದ ಹನುಮೇಗೌಡ ಮರ್ಕಲ್, ನಾಗನಗೌಡ ಸುಬೇದಾರ ಮಾತನಾಡಿದರು. ಪುರಸಭೆ ಅಧ್ಯಕ್ಷ ರಾಯಪ್ಪ ಸಾಲಿಮನಿ ಮಲ್ಲಣ್ಣ ಕಟ್ಟಿಮನಿ, ವಸಂತ ಸುರಪುರ, ಡಾ. ವೆಂಕಟೇಶ ಶಿರವಾಳಕರ್, ಡಾ. ಅನಿಲಕುಮಾರ, ಡಾ. ಜಗದೀಶ ಉಪ್ಪಿನ್ ಆಯುಷ್ ವೈದ್ಯಾಧಿಕಾರಿ ಡಾ. ಗಂಗಾಧರ ಸರಾಫ್ ಉಪಸ್ಥಿತರಿದ್ದರು. ಭೀಮಾಶಂಕರ ಬೆನಕನಹಳ್ಳಿ ನಿರ್ವಹಿಸಿದರು. ಡಾ. ಮೀರಾ ಜೋಶಿ ಪ್ರಾರ್ಥಿಸಿದರು. ಡಾ. ಪ್ರಮೋದ ಸ್ವಾಗತಿಸಿದರು. ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!