ಗುಲ್ಬರ್ಗಾ

ಕಾಯ್ದೆ ತಿದ್ದುಪಡಿಗೆ ಖಂಡನೆ

ಶಹಾಬಾದ್: ರಾಜ್ಯ ಸರಕಾರ 1966ರ ಎಪಿಎಂಸಿ ಕಾಯ್ದೆ ತಿದ್ದುಪಡಿ ತರುತ್ತಿರುವುದನ್ನು ವಿರೋಧಿಸಿ ನಗರದ ಅಡತ್ ವ್ಯಾಪಾರಸ್ಥರು, ದಾಲ್ ಮಿಲ್ ಮಾಲೀಕರು, ಸಿಬ್ಬಂದಿ ವರ್ಗ, ಹಮಾಲರು, ರೈತರು ಮಂಗಳವಾರ ತಮ್ಮ ವಹಿವಾಟು ಸ್ಥಗಿತಗೊಳಿಸಿ ಎಪಿಎಂಸಿ ಕಚೇರಿ ಮುಂದೆ ಧರಣಿ ನಡೆಸಿ ಮನವಿ ಸಲ್ಲಿಸಿದರು.
ನಗರದ ದಾಲ್ ಮಿಲ್ಲರ್ಸ್ ಮತ್ತು ಅಡತ್ ಅಸೋಷಿಯೇಷ್ ವತಿಯಿಂದ  ಅಧ್ಯಕ್ಷ ಶಿವುಕುಮಾರ ಇಂಗಿನಶೆಟ್ಟಿ, ಉಪಾಧ್ಯಕ್ಷ ಪ್ರಶಾಂತ ಮರಗೋಳ, ಕಾರ್ಯದರ್ಶಿ ಭೀಮರಾವ್ ಮೇಟಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
1966 ರಾಜ್ಯ ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಕೃಷಿ ಕ್ಷೇತ್ರ, ರೈತರು, ವ್ಯಾಪಾರಸ್ಥರು, ಸಿಬ್ಬಂದಿ, ಹಮಾಲರು ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಈ ತಿದ್ದುಪಡಿಯಿಂದ ರೈತರಿಗೆ, ವ್ಯಾಪಾರಸ್ಥರಿಗೆ ಗ್ರಾಹಕರ ಹಿತಾಸಕ್ತಿಗೆ ವಿರೋಧವಾಗಿದೆ. ಇದರಿಂದ ವ್ಯಾಪಾರಸ್ಥರು, ಸಿಬ್ಬಂದಿ, ಹಮಾಲರು ಅವರ ಮೇಲೆ ಅವಲಂಬಿಸಿರುವ ಕುಟುಂಬದವರು, ಬಂಡಿ, ತಳ್ಳುಗಾಡಿ ಕಾರ್ಮಿಕರು, ಕುಟುಂಬದವರು ನಿರುದ್ಯೋಗಿಗಳಾಗಬೇಕಾಗುತ್ತದೆ.  ಸರಕಾರ ಕೂಡಲೇ ಎಪಿಎಂಸಿ ಕಾಯ್ದೆ ತಿದ್ದುಪಡಿಯನ್ನು ಹಿಂದಕ್ಕೆ ಪಡೆಯಬೇಕು. ಅಥವಾ ಅವಲಿಂಬಿತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಎಪಿಎಂಸಿ ಕಾರ್ಯದರ್ಶಿ ಶಿವಶಂಕರ ನನ್ನಾ ಅವರಿಗೆ ಮನವಿ ಸಲ್ಲಿಸಿದರು.ಅಡತ್ ವ್ಯಾಪಾರಸ್ಥರಾದ ಶರಣಬಸಪ್ಪ ಕೋಬಾಳ, ಸಂತೋಷಕುಮಾರ ಇಂಗಿನಶೆಟ್ಟಿ, ಶರಣಬಸಪ್ಪ ಬಿರಾಳ, ಭೀಮರಾವ್ ಅಸ್ಪಲಿ, ಅಣ್ಣಪ್ಪ ದಸ್ತಾಪುರ, ಭೀಮಣ್ಣ ಖಂಡ್ರೆ ಅಸ್ಪಲಿ, ಅಣವೀರ ಇಂಗಿನಶೆಟ್ಟಿ, ನಾಗಶೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!