ಯಾದಗಿರಿ: ಹತ್ತಿಕುಣಿ ವಲಯದ ಕಟಗಿ ಶಹಾಪುರ ಗ್ರಾಮದಲ್ಲಿ ವಿದ್ಯುತ್ ಪರಿವರ್ತಕ ರಿಪೇರಿಗೆ ಆಗ್ರಹಿಸಿ ಕರವೇ ಕಾರ್ಯಕರ್ತರು ಜಿಲ್ಲಾ ಜೆಸ್ಕಾಂ ಉಪವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರಿಗೆ ಗುರುವಾರ ಮನವಿ ಸಲ್ಲಿಸಿದರು.
ವಿದ್ಯುತ್ ಶಾಕ್ ಹೊಡುತ್ತಿರುವುದರಿಂದ ಗ್ರಾಮದಲ್ಲಿ ಈಗಾಗಲೇ ದನ ಕರುಗಳು ಸತ್ತಿದ್ದು, ಹೆಚ್ಚಿನ ತೊಂದರೆ ಆಗುವ ಸಾಧ್ಯತೆ ಇದೆ. ವಿದ್ಯುತ್ ತಂತಿಗಳು ಸಹ ಜೋತು ಬಿದ್ದಿದ್ದು, ಕೂಡಲೇ ಇವುಗಳನ್ನು ಸರಿಪಡಿಸುವಂತೆ ಆಗ್ರಹಿಸಿದ್ದಾರೆ.
ಕರವೇ ಉತ್ತರ ಅಧ್ಯಕ್ಷ ಶರಣು ಗದ್ದುಗೆ, ತಾ. ಅಧ್ಯಕ್ಷ ದೇವು ಪಾಟೀಲ. ಚಂದ್ರಶೇಖ ಕೊಂಕಲ, ಚನ್ನವೀರಯ್ಯ ಸ್ವಾಮಿ, ಶಿವು ಮಾನೇಗಾರ ಮತ್ತಿತರರು ಇದ್ದರು.