ಚಿತ್ತಾಪುರ: ಪರಿಸರ ಕಲುಷಿತಗೊಳಿಸದೆ ಸ್ವಚ್ಛ ವಾತಾವರಣಕ್ಕೆ ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ಒಂದು ಸಸಿಯನ್ನು ಬೆಳೆಸಿದಲ್ಲಿ ಅಲ್ಲಿಯ ಪರಿಸರ ಹಾಳಾಗದೆ ಉತ್ತಮ ಪರಿಸರ ನಿರ್ಮಾಣವಾಗುತ್ತದೆ ಎಂದು ನವಜ್ಯೋತಿ ಸಮಾಜ ಸೇವಾ ಸಂಸ್ಥೆ ಅಧ್ಯಕ್ಷ ಮಾರುತಿ ಇವಣಿ ಹೇಳಿದರು. ತಾಲೂಕಿನ ಅಲ್ಲೂರ(ಬಿ) ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಪರಿಸರ ಜಾಗೃತಿ ಹಾಗೂ ಗಿಡ ನೆಡುವ ಕಾರ್ಯಕ್ರಮದಲ್ಲಿ ಸಸಿಯನ್ನು ನೆಟ್ಟು ಮಾತನಾಡಿದರು. ಶಾಲೆಯ ಶಿಕ್ಷಕ ಅಮೃತ ನಾಟೀಕಾರ, ಶಾಮರಾಯ ಶಿರೋಳ್ಳಿ, ಸಹದೇವಪ್ಪ, ವೆಂಕಟರೆಡ್ಡಿ ಪರಿಸರ ಕುರಿತು ಮಾತನಾಡಿದರು.