ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

4 ಲಕ್ಷ ಮೌಲ್ಯದ ಚಿನ್ನಾಭರಣ ಅಪಹರಣ

Rashmi Kasaragodu
Updated On : 2 Apr 2013, 12:31 pm

ಶ್ರೀರಂಗಪಟ್ಟಣ: ಬೃಂದಾವನ ವೀಕ್ಷಣೆಗೆ ಹೋಗಿದ್ದ ಪ್ರವಾಸಿಗರ ಮಾರುತಿ ಕಾರಿನ ಗ್ಲಾಸ್ ಗಾಜು ಹೊಡೆದು ಸುಮಾರು 4 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ಭಾನುವಾರ ಸಂಜೆ ಕೆ.ಆರ್.ಎಸ್.ನಲ್ಲಿ ಜರುಗಿದೆ.
ಚಿಕ್ಕಬಳ್ಳಾಪುರ ಅಫ್ರೋಜ್ ಪಾಷ ಎಂಬುವವರೇ ಚಿನ್ನಾಭರಣ ಕಳೆದುಕೊಂಡಿದ್ದು, ಈ ಬಗ್ಗೆ ಕೆಆರ್ಎಸ್ ಪೊಲೀಸರಿಗೆ ದೂರಿ ನೀಡಿದ್ದಾರೆ.
ಕುಟುಂಬ ಸಮೇತರಾಗಿ ಮಾರುತಿ ವ್ಯಾನ್ನಲ್ಲಿ ಚಿಕ್ಕಬಳ್ಳಾಪುರದಿಂದ ಆಗಮಿಸಿ ಪಾಷ ಕಾರ್ನಲ್ಲಿ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದರು. ಕುಟುಂಬ ಸದಸ್ಯರೊಂದಿಗೆ ಬೃಂದಾವನ ನೋಡಲು ತೆರಳಿದ್ದರು. ಇದೇ ಸಮಯ ನೋಡಿಕೊಂಡ ಕಳ್ಳರು ವ್ಯಾನ್ನ ಗ್ಲಾಸ್ ಒಡೆದು ಚಿನ್ನದ ಸರ, ಓಲೆ ಮಾಂಗಲ್ಯ, ಬಳೆ ಇತ್ಯಾದಿ ಚಿನ್ನಾದಾಭರಣಗಳಿದ್ದ ವ್ಯಾನಿಟಿ ಬಾಗ್ ಅಪಹರಿಸಿದ್ದಾರೆ.
ಕೆ.ಆರ್.ಎಸ್. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement