ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಉಡುಸಲಮ್ಮ ದೇವಿ ಜಾತ್ರೆ

Rashmi Kasaragodu
Updated On : 2 Apr 2013, 12:28 pm

ಆಲೂರು: ಕಸಬಾ ಮರಸು ಗ್ರಾಮದಲ್ಲಿ ಇತ್ತೀಚೆಗೆ ರಂಗನಾಥಸ್ವಾಮಿ ಮತ್ತು ಉಡುಸಲಮ್ಮ ದೇವಿ ಜಾತ್ರೆ ವೈಭವದಿಂದ ನೆರವೇರಿತು.
ದೊಡ್ಡಕೆರೆ ಗಂಗಾಸ್ಥಾನದಿಂದ ಉಡುಸಲಮ ಕಳಸವನ್ನು  ರಂಗನಾಥಸ್ವಾಮಿ ಮತ್ತು ಉಡುಸಲಮ್ಮ ದೇವಿ ಅಡ್ಡೆ ಉತ್ಸವದೊಂದಿಗೆ ನಡೆಮುಡಿಯಲ್ಲಿ ದೇವಸ್ಥಾನದವರೆಗೆ ವಾದ್ಯಗೋಷ್ಠಿ ಮತ್ತು ಹೊಗಳಿಕೆ ಹಾಡಿನೊಂದಿಗೆ ಬೆಳಗಾಗುವ ವೇಳೆಗೆ ತರಲಾಯಿತು. ಉಡುಸಲಮ್ಮ ದೇವಿ ಮಾತ್ರ ಕೆಂಡ ಹಾಯುತ್ತದೆ. ಪುರಾತನ ಕಾಲದಿಂದಲೂ ಮಡಿವಾಳ ವಂಶಸ್ಥರು ಗಂಗಾಸ್ನಾನದಿಂದ ಉಡುಸಲಮ್ಮ ಕಳಸವನ್ನು ಹೊತ್ತು ದೇವಸ್ಥಾನದವರೆಗೆ ಬಸಪ್ಪಶೆಟ್ಟಿ ನಡೆಮುಡಿಯಲ್ಲಿ ಬಂದರು.  ಕೆಂಡೋತ್ಸವದ ನಂತರ ನೆರೆದಿದ್ದ ಭಕ್ತರಿಗೆ ನ್ನದಾನ ಮಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement