'ಕಲೆ, ನಾಟಕಕ್ಕೆ ಪ್ರೋತ್ಸಾಹ ಅಗತ್ಯ' (ಸುದ್ದಿ ಸಂಕ್ಷೇಪ )
ಹಾಸನ: ಕಲೆ, ನಾಟಕಕ್ಕೆ ಪ್ರೋತ್ಸಾಹ ನೀಡಿ ಬೆಳಸಬೇಕು ಎಂದು ಸಮಾಜ ಸೇವಕ ಅಟ್ಟಾವರ ರಾಮದಾಸ್ ಅಭಿಪ್ರಾಯಪಟ್ಟಿದ್ದಾರೆ. ಚನ್ನರಾಯಪಟ್ಟಣದ ನಿರಂತರ ಕಲಾ ತಂಡದಿಂದ 4ದಿನಗಳ ಕಾಲ ಹಮ್ಮಿಕೊಂಡಿರುವ ರಂಗಹಬ್ಬದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ವಾರಿಧಿ ಕಲಾ ತಂಡ ನಡೆಸಿಕೊಟ್ಟ ಕೋಲಾಟ ಪ್ರದರ್ಶನ ಜಾನಪದ ಸ್ಪರ್ಧೆ ಆಯೋಜಿಸಿದರೆ 10 ಸಾವಿರ ಕಾಣಿಕೆ ನೀಡುವುದಾಗಿ ಪ್ರಕಟಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಲಿಮ್ಕಾ ನಂಜುಂಡ ಮೈಮ್, ತಾಲೂಕಿನಲ್ಲಿ ರಂಗಭೂಮಿ ಕಲಾವಿದರಿಗೆ ಕಲಾಭವನ ನಿರ್ಮಾಣಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಮಾಡಿದ್ದರೂ, ಹಲವು ವರ್ಷದಿಂದ ಕಾರ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಶರಣ ಸಂಸ್ಕೃತಿ ಯಾತ್ರೆಗೆ ಸ್ವಾಗತ
ಹಾಸನ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಸವ ಸಮಿತಿ ಮತ್ತು ರಾಜ್ಯದ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಬಸವ ಜಯಂತಿ ಶತಮಾನೋತ್ಸವ ಅಂಗವಾಗಿ ಜಿಲ್ಲೆಯಿಂದ ಜಿಲ್ಲೆಗೆ ಶರಣ ಸಂಸ್ಕೃತಿ ಮಹಾಯತ್ರೆ ಆಗಮಿಸಿತು.