ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮಿಂಚಿದ ನಾಟ್ಯ 'ಸಿಂಧೂರ'

Rashmi Kasaragodu
Updated On : 2 Apr 2013, 12:28 pm

ಜಾವಗಲ್: ಇಲ್ಲಿನ ಜೆ.ಎನ್.ಸಿಂಧೂರ ಭರತನಾಟ್ಯ ಕಲೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಇತ್ತೀಚೆಗೆ  ಬೆಂಗಳೂರಿನಲ್ಲಿ ರಂಗಪ್ರವೇಶ ಮಾಡಿದ್ದಾಳೆ.
ಜಾವಗಲ್ನ ಪುರೋಹಿತ ಕುಟಂಬದಲ್ಲಿ ಹುಟ್ಟಿ ಬೆಂಗಳೂರಿನ 'ಕನ್ನಡಪ್ರಭ' ಕೇಂದ್ರ ಕಚೇರಿಯಲ್ಲಿ ಕಾರ್ಯನಿರ್ವಹಿಸಿದ್ದ ನರಸಿಂಹಸ್ವಾಮಿ ಮತ್ತು ಪಾರ್ವತಿ ಪುತ್ರಿ. ಸಿಂಧೂರಳ ಅಣ್ಣ ತೇಜಸ್ ಪದವೀಧರನಾಗಿದ್ದು, ಮೃದಂಗ ಕಲಾವಿದನಾಗಿದ್ದಾನೆ. ಇಡೀ ಕುಟುಂಬವೇ ಕಲೆಯಲ್ಲಿ ಅಭಿರುಚಿ ಹೊಂದಿದೆ ತಾಯಿ ಹಾಡುಗಾರಿಕೆ ಹಾಗು ಬರಹಗಾರ್ತಿಯಾಗಿದ್ದಾರೆ.
ಸಿಂಧೂರ ತನ್ನ 6ನೇ ವಯಸ್ಸಿನಲ್ಲಿಯೇ ಭರತನಾಟ್ಯ ದಲ್ಲಿ ಆಸಕ್ತಿ ತೋರಿಸಿ, ಒಬ್ಬ ಉತ್ತಮ ಭರತನಾಟ್ಯ ಕಲಾವಿದೆಯಾಗಿ ಹೊರ ಹೊಮ್ಮಿದ್ದಾಳೆ. ಬೆಂಗಳೂರಿನ ವೆಂಕಟೇಶ್ ನಾಟ್ಯ ಮಂದಿರದ ಸಂಸ್ಥಾಪಕಿ, ತನ್ನ ಗುರು ರಾಧಾಶ್ರೀಧರ್ ಅವರಿಂದ ಪ್ರಭಾವಿತಳಾಗಿ ಭರತನಾಟ್ಯದಲ್ಲಿನ ಸೌಂದರ್ಯ ಮತ್ತು ದೈವತ್ವ ಕಂಡುಕೊಂಡಿದ್ದಾಳೆ. ಸಿಂಧೂರ ಈ ಮಧ್ಯೆ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲೇ ಪೂರ್ಣಗೊಳಿಸಿ ಬಿಇ ಪದವಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾಳೆ  ಭರತನಾಟ್ಯ ಸೀನಿಯರ್, ಸಂಗೀತಾ ಜೂನಿಯರ್  ಉತ್ತೀರ್ಣಳಾಗಿದ್ದು, ಭರತನಾಟ್ಯದ ಬಗ್ಗೆ ಉತ್ಕೃಷ್ಟ ಅಭಿರುಚಿ ಹೊಂದಿ ಸಾಧನೆ ಮಾಡುವ ಬಯಕೆ ಹೊಂದಿರುತ್ತಾಳೆ ಹಾಗು ವಿದ್ವತ್ ಪರೀಕ್ಷೆ ತೆಗೆದುಕೊಂಡಿದ್ದಾಳೆ.  ಬೆಂಗಳೂರು ಮೈಸೂರು ಹಾಸನ ಕಾಲೇಜು ಸೇರಿದಂತೆ ಹತ್ತಾರು ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿ ಪುರಸ್ಕಾರ ಪಡೆದಿದ್ದಾಳೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement