ರಂಗಭೂಮಿ ಸಮಾಜದ ಪ್ರತಿಬಿಂಬ
ಕ.ಪ್ರ. ವಾರ್ತೆ ರಾಮನಾಥಪುರ ಏ.1
ಉತ್ತೇಜನದ ಕೊರತೆಯಿಂದಾಗಿ ಸಾಮಾಜಿಕ ಬದುಕಿನ ನೈಜ ಚಿತ್ರಣವನ್ನು ನೀಡುತ್ತಲೇ ಸಮಾಜದ ಅಂಕು-ಡೊಂಕು ತಿದ್ದುವ ನಾಟಕವು ಕಲೆಗಳ ಉನ್ನತಿಗೆ ದಾರಿಯಾಯಾಗಿದೆ ಎಂದು ಶಾಸಕ ಎ.ಮಂಜು ಅಭಿಪ್ರಾಯಪಟ್ಟಿದ್ದಾರೆ.
ಪಟ್ಟಣದ ಶ್ರೀಬಸವೇಶ್ವರ ವೃತ್ತದಲ್ಲಿರುವ ಪಟ್ಟಾಭಿರಾಮ ಗ್ರಾಮಾಂತರ ಪ್ರೌಢಶಾಲಾ ಆವರಣದಲ್ಲಿ ಇತ್ತೀಚೆಗೆ ನಡೆದ ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ ಎಂಬ ಪೌರಾಣಿಕ ನಾಟಕದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾಟಕಗಳು ವಸ್ತು ಮಾತಿಗಷ್ಟೆ ಆಗದೇ ಕಾರ್ಯರೂಪಕ್ಕೆ ಬರುವಂತೆ ಮಾಡಬೇಕು. ಇಂದಿನ ನಾಟಕದ ಕಲಾವಿದರು ಹಾಗೂ ಇಂದಿನ ಚಿಕ್ಕವರಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರಿತಿಸಿದರೆ ಇದರಿಂದ ಧೈರ್ಯ, ತಿಳಿವಳಿಕೆ ಹಾಗೂ ಅಭಿನಯ, ರಂಗ ನಾಟಕಗಳಲ್ಲಿ ಭಾಗವಹಿಸುವುದರಿಂದ ಆತ್ಮ ವಿಶ್ವಾಸ ಹೆಚ್ಚುತ್ತದೆ ಎಂದರು.
ಜಿಪಂ ಮಾಜಿ ಸದಸ್ಯ ಶಂಕರ ಕಲೆ ಬಗ್ಗೆ ಮಾತನಾಡಿದರು. ಹಾಸನ ವಿಭಾಗ ಹಾಸನ ವಿಭಾಗೀಯ ನಿಯಂತ್ರಣಾಧಿಕಾರಿ ಸಂತೋಷಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ರಾಮನಾಥಪುರ ಗ್ರಾಪಂ ಅಧ್ಯಕ್ಷೆ ಸರಸ್ವತಿನಾಗೇಗೌಡ, ಹೋಬಳಿ ಅಧ್ಯಕ್ಷ ಜೆ.ಸಿ. ಮಂಜೇಗೌಡ, ಮುಖಂಡ ಬಿ.ಎನ್.ಸಂಸ್ಥೆ ಕಾರ್ಯದರ್ಶಿ ಅನಂತ್ ಸುಬ್ಬರಾವ್, ಶಿರದನಹಳ್ಳಿ ಎಸ್.ಎಂ.ಮಲ್ಲೇಶ್, ಗಂಗೂರು ಕುಮಾರಸ್ವಾಮಿ, ಜಿ.ಸಿ.ಮಂಜೇಗೌಡ ಕೂಡಲೂರು ಮೊಗಣ್ಣ ಹಾಗೂ ಬಸಪ್ಪ, ಗ್ರಾಪಂ ಉಪಾಧ್ಯಕ್ಷ ಕೃಷ್ಣೇಗೌಡ, ಸದಸ್ಯರಾದ ಬಿ.ಜೆ.ರಾಮೇಗೌಡ ಮತ್ತಿತರರು ಉಪಸ್ಥಿತರಿದ್ದರು.