'ಜೆಡಿಎಸ್-ಬಿಜೆಪಿ ಮಧ್ಯೆ ಹೊಂದಾಣಿಕೆ'
ಕ.ಪ್ರ.ವಾರ್ತೆ ಸಕಲೇಶಪುರ ಏ.2
ಸಕಲೇಶಪುರ ಜೆಡಿಎಸ್ ಮತ್ತು ಬಿಜೆಪಿ ಮಧ್ಯೆ ಹೊಂದಾಣಿಕೆ ನಡೆದಿದ್ದು, ಬಿಎಸ್ಆರ್ ಕಾಂಗ್ರೆಸ್ನೊಂದಿಗೆ ಸೇರಿಕೊಂಡಿದೆ ಎಂದು ಕೆಜೆಪಿ ರಾಜ್ಯ ಕಾರ್ಯದರ್ಶಿ ಬಿ.ಆರ್. ಗುರುದೇವ್ ಆರೋಪಿಸಿದರು.
ಸೋಮವಾರ ಕೆಜೆಪಿ ಕಚೇರಿ ಉದ್ಘಾಟಿಸಿ ಮಾತನಾಡಿ, ಕೋಮುವಾದಿ ಎಂದು ಹೇಳುತ್ತಲೇ ಜೆಡಿಎಸ್ ನಾಯಕರು ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದು, ಮುಂದಿನ ಸರ್ಕಾರ ರಜನೆಗೆ ಅಂಕಿ-ಸಂಖ್ಯೆಗಳ ಲೆಕ್ಕಾಚಾರ ಹಾಕುತ್ತಿದ್ದಾರೆ. ಜೆಡಿಎಸ್ ಮತ್ತು ಬಿಜೆಪಿಯೊಂದಿಗೆ ಬಿಎಸ್ಆರ್ ಕಾಂಗ್ರೆಸ್ ಸೇರಿಕೊಂಡು ಮಧ್ಯಸ್ಥಿಕೆ ನಡೆಸುತ್ತಿದೆ ಎಂದರು.
ಸ್ಥಳಿಯ ವ್ಯಕ್ತಿ ಈ ಕ್ಷೇತ್ರದ ಶಾಸಕನಾದರೆ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ. ಪರ ಕ್ಷೇತ್ರದವರಿಂದ ಎಂದಿಗೂ ಪ್ರಗತಿ ಸಾಧ್ಯವಿಲ್ಲ. ಮಾಜಿ ಸಜಿವೆಯೊಬ್ಬರು ಕಾಂಗ್ರೆಸ್ನಿಂದ ಈ ಕ್ಷೇತ್ರದಿಂದ ಟಿಕೆಟ್ ಬಯಸಿ ಪ್ರಯತ್ನಿಸುತ್ತಿದ್ದಾರೆ. ಇವರು ಸ್ವಕ್ಷೇತ್ರದಲ್ಲಿ ಮಾಡಿದ್ದಾದರೂ ಏನೆಂದು ಪ್ರಶ್ನಿಸಿದರು.
ಅಭ್ಯರ್ಥಿ ಉಮೇಶ್ ಬೆಳಗೋಡು ಮಾತನಾಡಿ, ನಾನು ಈ ಕ್ಷೇತ್ರದ ಅಭಿವೃದ್ಧಿಗೋಸ್ಕರ ಸ್ಪರ್ಧೆಯಲ್ಲಿದ್ದೇನೆ. ಇಲ್ಲಿಯ ಸಮಸ್ಯೆಗಳು ನನಗೆ ತಿಳಿದಿವೆ. ಇಲ್ಲಿಯ ಜನರ ಪರವಾಗಿ ಕೆಲಸ ಮಾಡಲು ಶ್ರಮಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ರಾಮಚಂದ್ರ, ವೆಂಕಟೇಶ್, ಭಾಸ್ಕರ್, ಕಾಡಪ್ಪ, ಪರ್ವತಯ್ಯ ಇದ್ದರು.