ಪರವಾನಗಿ ಆಯುಧ ಠೇವಣಿಗೆ ಆದೇಶ
ಹಾಸನ: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಜಾರಿ ಇರುವುದರಿಂದ ಆಯುಧ ಕಾಯಿದೆ ನಿಯಮಗಳಡಿ ಜಿಲ್ಲೆಯಲ್ಲಿನ ಪರವಾನಗಿ ಪಡೆದ ಆಯುಧಗಳನ್ನು ಸಂಬಂಧಿಪಟ್ಟ ಪೊಲೀಸ್ ಠಾಣೆಗಳಲ್ಲಿ ಠೇವಣಿ ಇಡಲು ಆದೇಶಿಸಲಾಗಿದೆ. ಮಲೆನಾಡಿನ ಗುಡ್ಡಗಾಡು ಪ್ರದೇಶದ ಒಂಟಿ ಮನೆಯಲ್ಲಿನ, ಠೇವಣಿಯಿಂದ ವಿನಾಯಿತಿ ಬಯಸುವವರು ತಮ್ಮ ಬಂದೂಕುಗಳನ್ನು ದುರುಪಯೋಗ ಪಡಿಸಿಕೊಳ್ಳುವುದಿಲ್ಲ, ಬೇರೆಯವರಿಗೆ ಬಳಸಲು ನೀಡುವುದಿಲ್ಲ, ಸಾರ್ವಜನಿಕರಿಗೆ ಮತ್ತು ಮತದಾರರಿಗೆ ಯಾವುದೇ ರೀತಿಯ ಭಯ ಮತ್ತು ಬೆದರಿಕೆ ಹಾಕುವುದಿಲ್ಲ, ಚುನಾ ವಣಾ ಪ್ರಕ್ರಿಯೆಗೆ ಯಾವುದೇ ರೀತಿಯ ಭಂಗ ತರುವುದಿಲ್ಲ ಎಂಬುದಾಗಿ ಆಯಾ ವ್ಯಾಪ್ತಿಯ ಪೊಲೀಸ್ ಉಪ ನಿರೀಕ್ಷಕರಿಗೆ ಲಿಖಿತ ಮನವಿಯನ್ನು ಸಲ್ಲಿಸಬೇಕು. ಅರ್ಜಿದಾರರ ಪೂರ್ವಾಪರ ಪರಿಶೀಲಿಸಿ ಠೇವಣಿಯಿಂದ ವಿನಾಯಿತಿ ನೀಡಲು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೆ.ಪಿ. ಮೋಹನ್ ರಾಜ್ ಆದೇಶಿಸಿದ್ದಾರೆ.