ವ್ಯಕ್ತಿ ನಾಪತ್ತೆ
ಮೈಸೂರು: ಹಾಸನ ಜಿಲ್ಲೆ ಅರಕಲಗೂಡು ತಾಲೂಕು ಕೇರಳಾಪುರ ಬಳಿಯ ಬಸವನಹಳ್ಳಿ ಕೊಪ್ಪಲು ನಿವಾಸಿ ಟಿ. ಕಾಳೇಗೌಡ ಎಂಬವರ ಪುತ್ರ ಬಿ.ಕೆ. ಕುಬೇಂದ್ರ (27) ಮೈಸೂರಿನಲ್ಲಿ ನಾಪತ್ತೆಯಾಗಿದ್ದಾರೆ.
ಟಾಟಾ ಏಸ್ ಗೂಡ್ಸ್ ವಾಹನವನ್ನು ಸರ್ವೀಸ್ ಮಾಡಿಸುವ ಸಲುವಾಗಿ ಬಸವನಹಳ್ಳಿ ಕೊಪ್ಪಲಿನಿಂದ ಕುಬೇಂದ್ರ ಮಾ. 28ರಂದು ಮೈಸೂರಿಗೆ ಬಂದಿದ್ದಾರೆ. ಅದೇ ದಿನ ಪ್ರೇರಣಾ ಮೋಟಾರ್ಸ್ನಲ್ಲಿ ಗೂಡ್ಸ್ ವಾಹನವನ್ನು ಸರ್ವೀಸ್ಗೆ ಬಿಟ್ಟು ನಾಪತ್ತೆಯಾಗಿದ್ದಾರೆ. ಚಹರೆ- 5.5 ಅಡಿ ಎತ್ತರ ಕನ್ನಡ ಮಾತನಾಡುತ್ತಾರೆ. ದೂ. 0821- 2418122, 322, 522 ಸಂಪರ್ಕಿಸಿ.