ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಶುಲ್ಕ ಪಾವತಿಸಲು 20 ಕಡೆ ದಿನ

Rashmi Kasaragodu
Updated On : 3 Apr 2013, 12:51 pm

ಹಾಸನ: ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿಯಲ್ಲಿ ಎಂಎ, ಎಂಕಾಂ ವಾರ್ಷಿಕ ಪರೀಕ್ಷೆಗಳು ಜೂನ್ 5ರಿಂದ ಆರಂಭವಾಗಲಿದ್ದು, ದಂಡವಿಲ್ಲದೆ ಪರೀಕ್ಷಾ ಶುಲ್ಕ ಪಾವತಿಸಲು ಏ, 20ರಂದು ಕಡೇ ದಿನವಾಗಿದೆ. 200 ದಂಡ ಶುಲ್ಕದೊಂದಿಗೆ ಮೇ 8 ಕಡೆ ದಿನವಾಗಿದೆ.  ಎಂಎ, ಎಂಕಾಂಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು.  ಹಾಗೂ ಭರ್ತಿ ಮಾಡಿದ ಅರ್ಜಿಗಳನ್ನು ಕುಲಸಚಿವರು (ಪರೀಕ್ಷಾಂಗ), ಕರಾಮು, ಮುಕ್ತ ಗಂಗೋತ್ರಿಗೆ ಅಂಚೆ ಅಥವಾ ಕೋರಿಯರ್ ಅಥವಾ ಖುದ್ದಾಗಿ ತಲುಪಿಸಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 08172-269244 ಸಂಖ್ಯೆಯನ್ನು ಸಂಪರ್ಕಿಸಬಹುದು.    ಅರ್ಜಿಗಳನ್ನು ಕರಾಮು ವಿವಿಯ ವೆಬ್ಸೈಟ್ನಿಂದ ಪಡೆಯಬಹುದು ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಹಾಸನ ಪ್ರಾದೇಶಿಕ ಕೇಂದ್ರದ ನಿರ್ದೇಸಕರಾದ ಪಿ. ಹರೀಶ್ ತಿಳಿಸಿದ್ದಾರೆ.
ಬೀಳ್ಕೊಡುಗೆ
ಹಾಸನ ವಯೋನಿವೃತ್ತಿ ಹೊಂದಿದ ತಾಲೂಕಿನ ಅರಸೀಹಳ್ಳಿ ಶಾಲೆಯ ಶಿಕ್ಷಕ ಮುನಿಸ್ವಾಮಿಗೆ ಇಲಾಖೆ ವತಿಯಿಂದ ಬೀಳ್ಕೊಡುಗೆ ಏರ್ಪಡಿಸಲಾಗಿತ್ತು.  ಶಾಲೆ ಶಿಕ್ಷಕರು, ಸಮೂಹ, ಸಂಪನ್ಮೂಲ ವ್ಯಕ್ತಿ ಎಚ್.ಡಿ. ರಂಗೇಗೌಡ, ಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ಕುಮಾರಸ್ವಾಮಿ ಅವರು ಮುನಿಸ್ವಾಮಿಯವರ ಸೇವೆಯನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ಸತೀಶ್, ಮಹದೇವ್, ಪಂಕಜ ಹಾಗೂ ಶಾಲಾ ಎಸ್ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement