ಕರಡಿ ದಾಳಿ: ವ್ಯಕ್ತಿಗೆ ಗಾಯ
ಕ.ಪ್ರ.ವಾರ್ತೆ ಹಾಸನ ಏ 3
ಕರಡಿಗಳು ಹಠಾತ್ ದಾಳಿ ನಡೆಸಿದ ಪರಿಣಾಮ ವ್ಯಕ್ಯಿಯೊಬ್ಬ ತೀವ್ರವಾಗಿ ಗಾಯಗೊಂಡ ಘಟನೆ ಅರಸೀಕೆರೆ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಕಲ್ಲೂರು ಗ್ರಾಮದ ರಮೇಶಪ್ಪ (55) ತೀವ್ರವಾಗಿ ಗಾಯಗೊಂಡ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಮೇಶಪ್ಪ ಮಂಗಳವಾರ ರಾತ್ರಿ ಶೌಚಕ್ಕೆಂದು ಮನೆಯಿಂದ ಸ್ವಲ್ಪ ದೂರದವರೆಗೆ ಹೋಗಿದ್ದರು.
ಈ ಸಂದರ್ಭದಲ್ಲಿ ಎರಡು ಮರಿ ಕರಡಿಗಳು ಅವರ ಮೇಲೆ ಎರಗಿ ಗಾಯಗೊಳಿಸಿವೆ. ನಂತರ ತಾಯಿ ಕರಡಿ ಬಂದು ತಲೆಗೆ ಗಾಯಗೊಳಿಸಿದೆ. ಈ ವೇಳೆ ಅವರು ಶಬ್ಧ ಮಾಡಿದ್ದರಿಂದ ಕರಡಿಗಳು ಓಡಿ ಹೋಗಿವೆ. ಅವರನ್ನು ಇಲ್ಲಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.