ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕೆಜೆಪಿ ಟಿಕೆಟ್ ಸಿಕ್ಕರೆ ಸ್ಪರ್ಧೆ ಖಚಿತ: ಪುಟ್ಟಸ್ವಾಮಿ

Mainashree
Updated On : 3 Apr 2013, 9:07 am

ಹಾಸನ: ಯಡಿಯೂರಪ್ಪ ನೇತೃತ್ವದ ಕೆಜೆಪಿ ಟಿಕೆಟ್ ಸಿಕ್ಕರೇ ಅರಕಲಗೂಡು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತ ಎಂದು ನಿವೃತ್ತ ಅಧಿಕಾರಿ ಕೆ.ಎಂ. ಪುಟ್ಟಸ್ವಾಮಿ ಹೇಳಿದ್ದಾರೆ.
ಯಡಿಯೂರಪ್ಪನವರ ಪುತ್ರ ವಿಜೇಂದ್ರ ಅವರು ಟಿಕೆಟ್ ನೀಡುವ ಭರವಸೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಕ್ಷೇತ್ರಾದ್ಯಂತ ಪ್ರಚಾರ ಮಾಡಿ ಜನಾಭಿಪ್ರಾಯ ಕೇಳಲಾಯಿತು. ಈ ಸಂದರ್ಭದಲ್ಲಿ ಜನತೆ ಕೆಜೆಪಿಯಿಂದ ಏನೇ ಆದರೂ ಸ್ಪರ್ಧಿಸಿ, ತಾವು ಬೆಂಬಲಿಸುವುದಾಗಿ ಹೇಳಿದ್ದಾರೆ. ಹಾಗಾಗಿ ಕೆಜೆಪಿಯಿಂದ ಸ್ಪರ್ಧಿಸುತ್ತಿರುವುದಾಗಿ ಅವರು ತಿಳಿಸಿದರು. ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಪುಟ್ಟಸ್ವಾಮಿ, ಕಾಂಗ್ರೆಸ್‌ನಿಂದ ಟಿಕೆಟ್ ಪಡೆಯಲು ತೀವ್ರ ಯತ್ನ ನಡೆಸಿದ್ದರು. ಆದರೆ ಹಾಲಿ ಶಾಸಕ ಎ.ಮಂಜು ಅವರಿಗೆ ಟಿಕೆಟ್ ನೀಡಲಾಗುತ್ತಿದ್ದು, ಇದರಿಂದ ತಮಗೆ ಬೇಸರವಾಗಿದೆ. ಆದ್ದರಿಂದ ಕೆಜೆಪಿಯಿಂದ ಸ್ಪರ್ಧಿಸಲು ಇಚ್ಛಿಸಿದ್ದೇನೆ.
ಒಂದು ವೇಳೆ ಕೆಜೆಪಿ ಟಿಕೆಟ್ ಸಿಗದಿದ್ದರೇ ಪಕ್ಷೇತರರಾಗಿ ಸ್ಪರ್ಧಿಸುವುದಿಲ್ಲ ಎಂದರು. ಏತನ್ಮಧ್ಯೆ, ಪುಟ್ಟಸ್ವಾಮಿ  ಯಡಿಯೂರಪ್ಪನವರ ಪುತ್ರ ವಿಜೇಂದ್ರ ಅವರನ್ನು ಭೇಟಿ ಆಗಿ ಟಿಕೆಟ್ ನೀಡುವ ಭರವಸೆ ಪಡೆದುಕೊಂಡಿರುವ ವಿಷಯ ತಿಳಿಯುತ್ತಿದ್ದಂತೆ ನಿವೃತ್ತ ಅಧಿಕಾರಿ ಪೊಟ್ಯಾಟೋ ಕ್ಲಬ್‌ನ ಯೋಗಾರವುಶ್ ಅವರು ಬಿಎಸ್‌ವೈರನ್ನು ಭೇಟಿ ಆಗಿದ್ದಾರೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement