ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜಾವಗಲ್ ರಾಜಶೇಖರ್‌ಗೆ ಜೆಡಿಎಸ್ ಟಿಕೆಟ್: ಆಗ್ರಹ

Rashmi Kasaragodu
Updated On : 3 Apr 2013, 11:42 am

ಕ.ಪ್ರ. ವಾರ್ತೆ ೤ ಜಾವಗಲ್‌೤ ಏ.3
ಹಿರಿಯ ರಾಜಕಾರಣಿ ಜಾವಗಲ್ ಎನ್.ಬಿ. ರಾಜಶೇಖರ್‌ಗೆ ಬೇಲೂರು ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ನೀಡುವಂತೆ ಜಾವಗಲ್ ಹೋಬಳಿ ಜೆಡಿಎಸ್ ಕಾರ್ಯಕರ್ತರು ಪಕ್ಷದ ವರಿಷ್ಠರನ್ನು ಒತ್ತಾಯಿಸಿದ್ದಾರೆ.
ಪ್ರವಾಸಿ ಮಂದಿರ ಮುಂಭಾಗ ಸಭೆ ಸೇರಿ ಎನ್.ಬಿ. ರಾಜಶೇಖರ್‌ಗೆ ಬೇಲೂರು ಕ್ಷೇತ್ರದಿಂದ ಜೆಡಿಎಸ್  ಟಿಕೆಟ್ ನೀಡುವಂತೆ ಮಾಜಿ ಪ್ರಧಾನಿ ದೇವೇಗೌಡ ಮತ್ತು ರೇವಣ್ಣ ಅವರನ್ನು ಭೇಟಿ ಮಾಡಲು ಹೋಬಳಿ ಕಾರ್ಯಕರ್ತರು ನಿರ್ಧರಿಸಿದರು.
ತಾಪಂ  ಮಾಜಿ ಉಪಾಧ್ಯಕ್ಷ ಸೋಮಶೇಖರ್ ಮಾತನಾಡಿ,  ರಾಜಶೇಖರ್ 3 ಬಾರಿ ಜಿಪಂ ಸದಸ್ಯ ಹಾಗೂ  ಉಪಾಧ್ಯಕ್ಷರಾಗಿ ಆಯ್ಕೆಯಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಸಮಾಜದ ಎಲ್ಲಾ ವರ್ಗದವರನ್ನು ಒಗ್ಗೂಡಿಸಿ ಕೊಂಡು ಹೋಗುವ ಸಾಮರ್ಥ್ಯ ಅವರಲ್ಲಿದ್ದು, ಅವರಿಗೆ ಜೆಡಿಎಸ್ ಟಿಕೆಟ್ ನೀಡುವಂತೆ ಮನವಿ ಮಾಡಿದರು.
 ಹಂದ್ರಾಳು ಗ್ರಾಪಂ ಮಾಜಿ ಅಧ್ಯಕ್ಷ ಹಿಂದಲ ಮನೆ ರಾಜಣ್ಣ ಮಾತನಾಡಿ,  ಈ ಕ್ಷೇತ್ರದಲ್ಲಿ ವೀರಶೈವರ ಸಂಖ್ಯೆ ಹೆಚ್ಚಾಗಿದ್ದು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಜಿಲ್ಲೆಯಲ್ಲಿ ವೀರಶೈವರೊಬ್ಬರಿಗೆ ಪ್ರಾತಿನಿಧ್ಯ ನೀಡಿದಂತಾಗುತ್ತದೆ ಎಂದರು.
ಜಿಪಂ ಮಾಜಿ ಉಪಾಧ್ಯಕ್ಷ ರಾಜಶೇಖರ್, ಗ್ರಾಪಂ ಮಾಜಿ ಅಧ್ಯಕ್ಷ ಜೆ.ಕೆ ಧನಕುಮಾರ್, ಮಹಾಲಿಂಗೇಗೌಡ, ತೀರ್ಥಕರ, ಸಂಕೀಹಳ್ಳಿ ಬಸವರಾಜು, ಕೃಷಿ ಪತ್ತಿನ ಸಂಘದ ಅಧ್ಯಕ್ಷ  ಬೋಜರಾಜು, ನಂಜುಂಡಪ್ಪ, ಮಾಜಿ ಸದಸ್ಯ  ಕೊಲ್ಲಾರ ಶೆಟ್ಟಿ, ಕುಮಾರಸ್ವಾಮಿ, ಶ್ರೀಕಂಠ, ಫಿರೋಜಗಾಂಧಿ, ಲಕ್ಷ್ಮೀನಾರಾಯಣ ಮಾತನಾಡಿ, ರಾಜಶೇಖರ್ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದರು.  
 ಗ್ರಾಪಂ ಸದಸ್ಯ ನಾಗರಾಜು, ಜಹೀರ್ ಅಹಮದ್ ಬಳುವಳ್ಳಿ ರಾಜಶೇಖರ್, ಈರೇಗೌಡ, ಪುಟ್ಟರಾಜು, ರಾಮಕೃಷ್ಣ, ಮಾವುತನ ಹಳ್ಳಿ ರವಿ ಮುಖಂಡರು, ಕಾರ್ಯಕರ್ತರು ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement