ಮೋಟಮ್ಮಗೆ ಟಿಕೆಟ್‌ಬೇಕಂತಮ್ಮ!
ಕ.ಪ್ರ.ವಾರ್ತೆ ಆಲೂರು ಏ.3
ಜಿಲ್ಲೆಯಲ್ಲಿ ಅತಿ ಹಿಂದುಳಿದ ಸಕಲೇಶಪುರ- ಆಲೂರು ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಮೋಟಮ್ಮಗೆ ಟಿಕೆಟ್ ನೀಡಬೇಕೆಂದು ವರಿಷ್ಠರನ್ನು ಒತ್ತಾಯಿಸಿರುವುದಾಗಿ ತಾಲೂಕು ಎಸ್ಸಿ, ಎಸ್ಟಿ ಘಟಕ ಅಧ್ಯಕ್ಷ ಎಚ್.ಎಂ.ಅಣ್ಣಪ್ಪ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 20 ವರ್ಷಗಳಿಂದ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಯಾರೇ ಶಾಸಕರಾಗಿ ಚುನಾಯಿತರಾಗಿದ್ದರೂ ಕಾರ್ಯಕರ್ತರು ಪ್ರಾಮಾಣಿಕರಾಗಿ ಶ್ರಮಿಸುತ್ತಿದ್ದಾರೆ. ಕಾರ್ಯಕರ್ತರ ಹಾಗೂ ಕ್ಷೇತ್ರದ ಹಿತದೃಷ್ಟಿಯಿಂದ ಮೋಟಮ್ಮಗೆ ಟಿಕೆಟ್ ನೀಡಬೇಕು. ಮೋಟಮ್ಮನವರೇ ಸೂಕ್ತ ಅಭ್ಯರ್ಥಿ. ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಬೀಸುತ್ತಿದ್ದು, ಅವರು ಸ್ಪರ್ಧಿಸಿದರೆ ಗೆಲವು ಖಚಿತ ಎಂದರು.
ಮೂಡಿಗೆರೆಯವರಾದ ಮೋಟಮ್ಮ, ಮಲೆನಾಡು ಭಾಗದ ಸಮಸ್ಯೆ ಅರಿತವರಾಗಿದ್ದಾರೆ. ಆದರೆ ಈ ಭಾಗದ ಜ್ವಲಂತ ಸಮಸ್ಯೆಗಳು ಗೊತ್ತಿಲ್ಲದ ಹಾಗೂ ಕಾರ್ಯಕರ್ತರಿಗೆ ಪರಿಚಯವೇ ಇಲ್ಲದ ಡಿ.ಮಲ್ಲೇಶ್ ಅವರನ್ನು ಕ್ಷೇತ್ರದಲ್ಲಿ ಸ್ಪರ್ಧೆಗಿಳಿಸಲು ತೆರೆಮರೆಯಲ್ಲಿ ಕಸರತ್ತು ನಡೆದಿದ್ದು, ಇದನ್ನು ವಿರೋಧಿಸುತ್ತೇವೆ ಎಂದರು.
ಈ ಹಿಂದೆ ನಡೆದ ಚುನಾವಣೆಗಳಲ್ಲಿ ಅಭ್ಯರ್ಥಿ ಆಯ್ಕೆಯನ್ನು ಸ್ಥಳೀಯ ಕಾರ್ಯಕರ್ತರ ಮುಖಂಡರ ಅಭಿಪ್ರಾಯ ಕ್ಷೇತ್ರದಲ್ಲಿ 14 ಮಂದಿ ಆಕಾಂಕ್ಷಿಗಳಿದ್ದು, ನಾವೆಲ್ಲರೂ ಪ್ರಥಮ ಆದ್ಯತೆ ಮೋಟಮ್ಮನವರಿಗೆ ನೀಡುತ್ತಿದ್ದು, ಅವರಿಗೆ ಟಿಕೆಟ್ ನೀಡಿದರೆ ನಾವು ಅವರ ಗೆಲವಿಗೆ ಶ್ರಮಿಸುತ್ತೇವೆ.
ಇಲ್ಲದಿದ್ದರೆ ಸಭೆ ಸೇರಿ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದರು. ತಾಲೂಕು ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಖಾಲಿದ್‌ಪಾಶ, ತಾಲೂಕು ರಾಜೀವ್‌ಗಾಂಧಿ ಪಂಚಾಯತ್‌ರಾಜ್ ಅಧ್ಯಕ್ಷ ಶಾಂತಕೃಷ್ಣ, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಟೀಕ್‌ರಾಜ್, ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯ ಎನ್.ಎಲ್. ಪಾಂಡುರಂಗಸ್ವಾಮಿ, ಕಟ್ಟಾಯ ರವಿಕುಮಾರ್ ಇದ್ದರು.