ಬಸ್‌ಪಾಸ್ ನವೀಕರಣ: 30 ಕಡೇ ದಿನ
ಹಾಸನ: ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ವಿಕಲಚೇತನರಿಗೆ ರಿಯಾಯಿತಿ ದರದ ಬಸ್ ಪಾಸ್ ಸೌಲಭ್ಯ ಒದಗಿಸಲಾಗಿದೆ.
ಪಾಸ್‌ಗಳನ್ನು ಏ.1 ರಿಂದ ಏ.30 ರವರೆಗೆ ನವೀಕರಿಸಲಾಗುತ್ತಿದ್ದು, ವಿಕಲಚೇತನರು 2012ನೇ ಸಾಲಿನ ಪಾಸ್, 2 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಅಂಗವಿಕಲರ ಗುರುತಿನ ಚೀಟಿ ಹಾಗೂ 550 ರು. ನೊಂದಿಗೆ ತನವೀಕರಿಸಿಕೊಳ್ಳಲು ಕೋರಿದೆ. ಮಾಹಿತಿಗಾಗಿ ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಕಚೇರಿ, 9ನೇ ಕ್ರಾಸ್, ಕೆ.ಆರ್.ಪುರಂ., ಹಾಸನ ದೂ: 08172-264546ನ್ನು ಸಂಪರ್ಕಿಸಬಹುದು.