ಭೂಮಿ ಮೇಲ್ಭಾಗ ಸ್ವಿಚ್ ಬಾಕ್ಸ್ ಅಳವಡಿಕೆ: ಆತಂಕ
ಕನ್ನಡಪ್ರಭ ವಾರ್ತೆ ಜಾವಗಲ್ ಏ.4
ಇಲ್ಲಿನ ಸರಸ್ವತಿಪುರ ಬಡಾವಣೆಯಲ್ಲಿರುವ ಕೊಳವೆ ಬಾವಿಗೆ ಕುಡಿಯುವ ನೀರಿನ ಸರಬರಾಜು ಕಲ್ಪಿಸಿದ್ದು ನೀರು ಸರಬರಾಜು ಮಾಡಲು ಅಳವಡಿಸಿರುವ ಸ್ವಿಚ್ ಬಾಕ್ಸ್ ಅನ್ನು ಭೂಮಿಯ ಮೇಲ್ಭಾಗದಲ್ಲಿ ವಿದ್ಯುತ್ ಕಂಬವೊಂದಕ್ಕೆ ಅಳವಡಿಸಲಾಗಿದ್ದು, ಇದನ್ನು ಮಕ್ಕಳು ಆಟವಾಡುವಾಗ ತೆಗೆಯಬಹುದಾಗಿದೆ. ಇದರಿಂದ ಕರೆಂಟ್ ಇದ್ದ ವೇಳೆ ಏನಾದರೂ ಅಪಾಯ ಸಂಭವಿಸಬಹುದೆಂದು ಬಡಾವಣೆಯ ನಿವಾಸಿಗಳು ಆತಂಕಗೊಂಡಿದ್ದಾರೆ. ಕರೆಂಟ್ನ ಅರಿವಿಲ್ಲದ ಮಕ್ಕಳು ಸ್ವಿಚ್ ಬೋರ್ಡ್ನ ಬಾಗಿಲು ತೆರೆದು ನೋಡುತ್ತವೆ ಎಂದು ಇಲ್ಲಿನ ಸೋಮೇಗೌಡ ಜಗನ್ನಾಥ್ ತಿಳಿಸಿದ್ದಾರೆ. ಆದ್ದರಿಂದ ಮಕ್ಕಳಿಗೆ ಸ್ವಿಚ್ ಸಿಗದ ರೀತಿಯಲ್ಲಿ ಎತ್ತರಕ್ಕೆ ಅಳವಡಿಸಿ ಮುಂದೆ ಆಗಬಹುದಾದ ಅನಾಹುತ ತಪ್ಪಿಸುವಂತೆ ಬಡಾವಣೆಯ ನಾಗರಿಕರು ಆಗ್ರಹಿಸಿದ್ದಾರೆ. ಕೂಡಲೆ ಗ್ರಾಮ ಪಂಚಾಯ್ತಿ ಮತ್ತು ಕೆಪಿಟಿಸಿಎಲ್ ನವರು ಗಮನಹರಿಸ ಬೇಕೆಂದು ಒತ್ತಾಯಿಸಿದ್ದಾರೆ.