ರಾಜಕಾರಣಕ್ಕೆ ಯುವಕರು ಪ್ರವೇಶಿಸಬೇಕು: ಯೋಗೀಶ್
ಕನ್ನಡಪ್ರಭ ವಾರ್ತೆ ಹಾಸನ ಏ.4
ರಾಜಕಾರಣಕ್ಕೆ ಯುವಕರು ಧುಮುಕಿದರೆ ಮಾತ್ರ ಸಮಾಜವನ್ನು ಸುಧಾರಿಸಿ, ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಸಾಧ್ಯ ಎಂದು ಕೆಜೆಪಿ ಯುವ ಮುಖಂಡ ಶ್ರೀನಗರ ಯೋಗೀಶ್ ಹೇಳಿದರು.
ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾದ ದಿ.ನಿಜಲಿಂಗಪ್ಪನವರ ಕಾಲದಲ್ಲಿ ಅಭಿವೃದ್ಧಿಯನ್ನು ಮೂಲಮಂತ್ರವನ್ನಾಗಿಸಿಕೊಂಡು ರಾಜ್ಯಕ್ಕೆ ಮಾದರಿಯಾದ ಮಹಾನ್ ವ್ಯಕ್ತಿಗಳಾಗಿದ್ದರು. ಆದರೆ ಇಂದಿನ ರಾಜಕಾರಣಿಗಳು ಕೇವಲ ಸ್ವಾರ್ಥ ಮನೋಭಾವದವರಾದ ಕಾರಣ ಅಭಿವೃದ್ಧಿ ಕಾರ್ಯಗಳು ಮರೀಚಿಕೆಯಾಗ ತೊಡಗಿದೆ ಎಂದು ವಿಷಾದಿಸಿದರು.
ಯುವಕರು ರಾಜಕೀಯಕ್ಕೆ ಪ್ರವೇಶಿಸುವುದು ಎಷ್ಟು ಮುಖ್ಯವೋ, ಅಷ್ಟೇ ದೇಶದ ಪ್ರಗತಿಗೆ ಮುನ್ನುಡಿ ಬರೆಯುವಂತಾಗಲಿ ಎಂದಿರುವ ಅವರು, ರಾಜ್ಯ, ದೇಶದ ಅಭಿವೃದ್ಧಿ ಹಾಗೂ ಪ್ರಗತಿಗಾಗಿ, ಬೆನ್ನೆಲುಬಾಗಿ ನಿಲ್ಲುವ ಯುವಕರ ಜತೆ ಸದಾ ಕೆಜೆಪಿ ನಿಲ್ಲಲಿದೆ. ಅಭಿವೃದ್ಧಿ ಪರವಾಗಿರುವ ಯುವಕರಿಗೆ ಕೆಜೆಪಿ ಪಕ್ಷದ ಬಾಗಿಲು ಸದಾ ತೆರೆದಿರುತ್ತದೆ ಎಂದಿರುವ ಅವರು ಯುವಕರನ್ನು ಕೆಜೆಪಿಗೆ ಆಹ್ವಾನಿಸಿದ್ದಾರೆ.