ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸೀಮಾಗೆ ಬೆಳ್ಳಿ ಪದಕ

Rashmi Kasaragodu
Updated On : 5 Apr 2013, 12:01 pm

ಕನ್ನಡಪ್ರಭ ವಾರ್ತೆ೤ ಹಾಸನ೤ ಏ.4
ಭಾರತ ಪ್ರಾಧಿಕಾರದ ಆಶ್ರಯದಲ್ಲಿ ಇತ್ತೀಚೆಗೆ ಆಂಧ್ರ ಪ್ರದೇಶದಲ್ಲಿ ನಡೆದ ರಾಷ್ಟ್ರಮಟ್ಟದ  ಗ್ರಾಮೀಣ ಪೈಕಾ ಕ್ರೀಡಾಕೂಟದ ಗುಂಪು 3ರ ಸ್ಪರ್ಧೆ ಖೋಖೋ ಮತ್ತು ಕಬಡ್ಡಿ ಪಂದ್ಯದಲ್ಲಿ ತಾಲೂಕಿನ ಹೆರಗು ಗ್ರಾಮದ ಜನತಾ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಎಚ್.ಕೆ.ಸೀಮಾ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದು, ತಂಡ ಬೆಳ್ಳಿ ಪದಕ ಪಡೆದಿದೆ. ಕರ್ನಾಟಕ ತಂಡ ಬೆಳ್ಳಿ ಪದಕ ಪಡೆಯಲು ಸೀಮಾ ಅವರ ಆಲ್‌ರೌಂಡ್ ಆಟ ಸಹಕಾರಿಯಾಗಿದೆ. ಪದಕ ವಿಜೇತ ಸೀಮಾ ಅವರಿಗೆ ಸಂಸ್ಥೆ ಅಧ್ಯಕ್ಷ ಎಚ್.ಟಿ.ಪುಟ್ಟಕಳಸೇಗೌಡ, ಕಾರ್ಯದರ್ಶಿ ಎಚ್.ಟಿ.ನಿಂಗೇಗೌಡ, ಕೆ. ಸಿದ್ದೇಗೌಡ, ನಿರ್ದೇಶಕರು, ಶಾಲೆಯ ಮುಖ್ಯೋಪಾಧ್ಯಾಯ ಎಂ.ಎಸ್.ಮಂಜುನಾಥ್, ದೈಹಿಕ ಶಿಕ್ಷಕ  ಎಚ್.ಎಸ್.ರಮೇಶ್, ಶಾಲಾ ವೃಂದ ಮತ್ತು ನೌಕರ ವರ್ಗದವರು ಶುಭ ಹಾರೈಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement