ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಟಿಕೆಟ್ ನೀಡದಿದ್ದರೆ ರಾಜಿನಾಮೆ ಬೆದರಿಕೆ

Rashmi Kasaragodu
Updated On : 5 Apr 2013, 11:21 am

ಕನ್ನಡಪ್ರಭ ವಾರ್ತೆ೤ ಹಾಸನ೤ ಏ 5
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಗಳ ಮಹಾಪೂರ. ವಿಧಾನಸಭೆ ಚುನಾವಣೆಗೆ ಟಿಕೆಟ್ ನೀಡಬೇಕೆಂಬ ಆಗ್ರಹ ಇಲ್ಲವೇ ಪಕ್ಷ ತ್ಯಜಿಸುವ ಬೆದರಿಕೆ. ಹೀಗೆ ಏಕಕಾಲದಲ್ಲಿ ಆಗ್ರಹ ಮತ್ತು ಎಚ್ಚರಿಕೆಯನ್ನು ನಾನಾ ರಾಜಕೀಯ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳಲ್ಲದೇ ಕೆಲ ಸಂಘಟನೆಗಳ ಮುಖಂಡರು ತಮ್ಮ ಸಮಾಜಕ್ಕೆ ಟಿಕೆಟ್ ನೀಡಬೇಕೆಂದು ಆಗ್ರಹಿಸಿದರಲ್ಲದೆ, ಟಿಕೆಟ್ ನೀಡದಿದ್ದರೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸುವ ಎಚ್ಚರಿಕೆಯನ್ನೂ ನೀಡಿದರು. ಕೆಲವರು ತಮಗೆ ಬೇಕಾದವರಿಗೆ ಟಿಕೆಟ್ ನೀಡಿ ಇಲ್ಲವೇ ಪ್ರತಿಭಟನೆ ಎದುರಿಸಿ ಎಂಬ ಬೆದರಿಕೆಯನ್ನೂ ಹಾಕಿದರು.
ನಗರದಲ್ಲಿ ಪ್ರತ್ಯೇಕವಾಗಿ ನಾನಾ ರಾಜಕೀಯ ಪಕ್ಷದವರು ಸುದ್ದಿಗೋಷ್ಠಿ ನಡೆಸಿ ತಮಗೆ, ತಮ್ಮ ಸಮುದಾಯವದರಿಗೆ ಹಾಗೂ ತಮ್ಮ ನಾಯಕರಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ಒಂದೇ ರಾಜಕೀಯ ಪಕ್ಷದವರು ತಮ್ಮ ವಿರುದ್ಧ ಮತ್ತೊಬ್ಬರಿಗೆ ಟಿಕೆಟ್ ನೀಡಿದರೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ಕೂಡ ನೀಡಿದ್ದಾರೆ.

ಕೆಲವತ್ತಿ ಸೋಮಶೇಖರ್ಗೆ ಟಿಕೆಟ್ಸಕಲೇಶಪುರ-ಆಲೂರು-ಕಟ್ಟಾಯ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲು ತಮಗೆ ಅವಕಾಶ ಕಲ್ಪಿಸಬೇಕು ಎಂದು ಕೋರಿರುವ ಕಾಂಗ್ರೆಸ್ ಮುಖಂಡ ಕೆಲವತ್ತಿ ಸೋಮಶೇಖರ್ ಅವರು, ಈ ಮೀಸಲು ಕ್ಷೇತ್ರದಿಂದ ಡಿ.ಮಲ್ಲೇಶ್ ಗೆ ಟಿಕೆಟ್ ನೀಡಿದರೆ ಪದಾಧಿಕಾರಿಗಳೆಲ್ಲ ಸೇರಿ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದರು.
ಸುಮಾರು 25 ವರ್ಷಗಳಿಂದ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತನಾಗಿ  ದುಡಿದಿದ್ದೇನೆ. ಸಕಲೇಶಪುರ-ಆಲೂರು-ಕಟ್ಟಾಯ ಮೀಸಲು ಕ್ಷೇತ್ರದಲ್ಲಿ ಸಾಕಷ್ಟು ಬಾರಿ ಸಂಚರಿಸಿ ರೈತರು, ದಲಿತರ ಸಂಕಷ್ಟಗಳ ಪರ ಹೋರಾಟ ಮಾಡುತ್ತಾ ಬಂದಿದ್ದು, ಜನಸಂಘಟನೆಯಲ್ಲಿ ಹೆಚ್ಚಿನ ವಿಶ್ವಾಶಗಳಿಸಿದ್ದೇನೆ. ಪಕ್ಷದ ಪ್ರಮುಖರು ಈ ಕ್ಷೇತ್ರದಿಂದ ತಮಗೆ ಟಿಕೆಟ್ ನೀಡುವಂತೆ ಮನವಿ ಮಾಡಿದರು.
ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷನಾಗಿ, ಜಿಲ್ಲಾ ಸಹಕಾರಿ ಸಗಟು ಸಂಸ್ಥೆ ನಿರ್ದೇಶಕನಾಗಿಯೂ ಕಾರ್ಯನಿರ್ವಹಿಸಿದ್ದೇನೆ. ಕೆಪಿಸಿಸಿ ಹಾಗೂ ಎಐಸಿಸಿ ಅಧ್ಯಕ್ಷರು ನನಗೇ ಟಿಕೆಟ್ ನೀಡಬೇಕು. ಒಂದು ವೇಳೆ ಡಿ.ಮಲ್ಲೇಶ್ಗೆ ಟಿಕೆಟ್ ನೀಡಿದಲ್ಲಿ ತಾವು ಹಾಗೂ  ಪದಾಧಿಕಾರಿಗಳು ಸಾಮೂಹಿಕವಾಗಿ ರಾಜೀನಾಮೆ ನೀಡುವುದಾಗಿ ಎಚ್ಚರಿಸಿದರು. ಜಿಲ್ಲಾ ಎಸ್ಸಿಎಸ್ಟಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಗ್ರಾಪಂ ಮಾಜಿ ಉಪಾಧ್ಯಕ್ಷ ನಾಯಕರಹಳ್ಳಿ ಅಶೋಕ್, ಸಾಲಗಾಮೆ ಪ್ರಕಾಶ್, ಕುಮಾರಸ್ವಾಮಿ ಮತ್ತು ಮೂಡಲಯ್ಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement