ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಭುಜೇಂದ್ರ ಅಭ್ಯರ್ಥಿ ಎಂದೇಳುತ್ತಿರುವುದು ಸತ್ಯಕ್ಕೆ ದೂರ: ರಾಮಚಂದ್ರ ಸ್ಪಷ್ಟನೆ

Rashmi Kasaragodu
Updated On : 5 Apr 2013, 11:23 am

ಕನ್ನಡಪ್ರಭ ವಾರ್ತೆ೤ ಬೇಲೂರು೤ ಏ.5
ಬಳ್ಳಾರಿಯಲ್ಲಿ ಇತ್ತೀಚೆಗೆ ನಡೆದ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ದಾಕ್ಷಾಯಿಣಿ ಸೋಮಣ್ಣನವರು ಬೇಲೂರು ವಿಧಾನಸಭೆಗೆ ಅಧಿಕೃತ ಅಭ್ಯರ್ಥಿ ಎಂದು ಶ್ರೀರಾಮುಲು ಘೋಷಣೆ ಮಾಡಿದ್ದರು. ಆದರೆ ಬಿ.ಆರ್. ಭುಜೇಂದ್ರ ಅವರು ನಾನೇ ಇಲ್ಲಿ ಅಭ್ಯರ್ಥಿ ಎಂದು ಹೇಳುತ್ತಿರುವುದು ಸತ್ಯಕ್ಕೆ ದೂರವಾಗಿದೆ ಎಂದು ಬೇಲೂರು ವಿಧಾನಸಭಾ ಕ್ಷೇತ್ರ ಬಿಎಸ್ಆರ್ ಕಾಂಗ್ರೆಸ್ ಅಧ್ಯಕ್ಷ ಎಸ್.ವೈ.ರಾಮಚಂದ್ರ  ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಿಂಗಳ ಹಿಂದೆ ಶ್ರೀರಾಮಲು ಸ್ವತಃ ಬೇಲೂರು ವಿಧಾನಸಭಾ ಕ್ಷೇತ್ರಕ್ಕೆ ಜನಪ್ರಿಯ ದಾಕ್ಷಾಯಿಣಿ ಸೋಮಣ್ಣ ಅವರಿಗೆ ಟಿಕೆಟ್ ನೀಡುತ್ತೇನೆ. ನೀವು ಕ್ಷೇತ್ರದಲ್ಲಿ ಕಾರ್ಯಕರ್ತರ  ಸಂಘಟನೆ ಮಾಡುವ ಮೂಲಕ ಪಕ್ಷವನ್ನು ಗೆಲ್ಲಿಸಬೇಕು ಎಂದು ತಿಳಿಸಿದ್ದಾರೆ ಎಂದರು.
ಆದರೆ ಭುಜೇಂದ್ರ ಅವರು ಈ ರೀತಿಯ ಹೇಳಿಕೆ ನೀಡುವ ಮೂಲಕ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದ ಅವರು, ತಾವು ಹೊದ ಕಡೆಯಲ್ಲಿ ಪತ್ರಿಕೆಯಲ್ಲಿ ಸುಳ್ಳು ಹೇಳಿಕೆ ನೀಡಿದ್ದಾರೆ. ಅಲ್ಲದೆ ಶ್ರೀರಾಮಲು ಕಳೆದ 6 ತಿಂಗಳ ಹಿಂದೆ ಪಕ್ಷದ ಅಧ್ಯಕ್ಷನಾದ ನನಗೆ ಪಕ್ಷವನ್ನು ಕೆಳ ಮಟ್ಟದಿಂದ ಕಟ್ಟುವ ಸಲುವಾಗಿ ಹೋಬಳಿ ಘಟಕ ಹಾಗೂ ಬೂತ್ ಸಮಿತಿ ರಚನೆ ಮಾಡಲು ಹಸಿರು ನಿಶಾನೆ ತೋರಿಸಿದ್ದಾರೆ. ಆದರೆ ಇಂದು ಏಕಾಏಕಿ ಬಂದ ಭುಜೇಂದ್ರ ಹೀಗೆ ಸತ್ಯಕ್ಕೆ ದೂರವಾದ ಹೇಳಿಕೆ ನೀಡುವುದು ನಿಜಕ್ಕೂ ಶೋಚನೀಯ.ಎಂದರು.  ಪ್ರಧಾನ ಕಾರ್ಯದರ್ಶಿ ಜಾಕೀರ್ಪಾಶಾ, ಹಳೇಬೀಡು ಹೋಬಳಿ ಅಧ್ಯಕ್ಷ ಮಲ್ಲೇಶಪ್ಪ, ಜಾವಗಲ್ ಹೋಬಳಿ ಅಧ್ಯಕ್ಷ ತಾಂಡವೇಶ್, ಬಿಕ್ಕೋಡು ಅಧ್ಯಕ್ಷ ಚಂದ್ರು, ಆರೇಹಳ್ಳಿ ಮೆಕಾನಿಕ್ಬಾಬು, ಮೂರ್ತಿ, ಶ್ರೇಯಸ್, ರಾಜು, ಜಯಣ್ಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement