ಚಿನ್ನೇನಹಳ್ಳಿಯವರ ಅಂತ್ರ ಕಾದಂಬರಿ ಬಿಡುಗಡೆ ಇಂದು
ಬೇಲೂರು: ಯುವ ಲೇಖಕರ ಬಳಗ ಹಾಗೂ ಮನೆ ಮನೆ ಕವಿಗೋಷ್ಠಿ ಆಶ್ರಯದಲ್ಲಿ ಚಿನ್ನೇನಹಳ್ಳಿ ಸ್ವಾಮಿಯವರ ಅಂತ್ರ ಕಾದಂಬರಿ ಬಿಡುಗಡೆ ಸಮಾರಂಭ ಏ.7 ರಂದು ಬೆಳಗ್ಗೆ 10.20 ಕ್ಕೆ ತಾಲೂಕಿನ ಚಿನ್ನೇನಹಳ್ಳಿಯಲ್ಲಿ ನಡೆಯಲಿದೆ. ಸಾಹಿತಿ ಹಾಡ್ಲಹಳ್ಳಿ ನಾಗರಾಜ್ ಕಾರ್ಯಕ್ರಮ ಉದ್ಘಾಟಿಸುವರು. ಬೆಂಗಳೂರಿನ ಹಿರಿಯ ಸಾಹಿತಿ ಶೂದ್ರ ಶ್ರೀನಿವಾಸ ಪುಸ್ತಕ ಬಿಡುಗಡೆ ಮಾಡುವರು. ಕೃತಿ ಕುರಿತು ಪ್ರೊ. ಸೀ.ಚ.ಯತೀಶ್ವರ ಮಾತನಾಡುವರು. ಹಿರಿಯ ಪತ್ರಕರ್ತ ಸತ್ಯಮೂರ್ತಿ ಆನಂದೂರು ಅಧ್ಯಕ್ಷತೆ ವಹಿಸುವರು. ನಂತರ ನಡೆಯುವ ರಾಜ್ಯಮಟ್ಟದ ಕವಿಗೋಷ್ಠಿಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಚ್.ಎಲ್. ಜನಾರ್ದನ ಉದ್ಘಾಟಿಸುವರು. ನಲ್ನುಡಿ ಸಂಪಾದಕ ದ ದಿನೇಶಕುಮಾರ ಅಧ್ಯಕ್ಷತೆ ವಹಿಸುವರು. ಡಾ. ಹಂಪನಹಳ್ಳಿ ತಿಮ್ಮೇಗೌಡ, ಡಾ.ಎ.ಎಂ ನಾಗೇಶ್, ಟಿ.ಡಿ. ತಮ್ಮಣ್ಣಗೌಡ ಭಾಗವಹಿಸುವರು