ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮಾಹಿತಿ ಕೇಳಿದ್ದಕ್ಕೆ ರು. 4,40,432 ಪಾವತಿಗೆ ಸೂಚನೆ

Rashmi Kasaragodu
Updated On : 6 Apr 2013, 11:10 am

ಕ.ಪ್ರ. ವಾರ್ತೆ೤ ಸಕಲೇಶಪುರ೤ ಏ.6
ಮಾಹಿತಿ ಹಕ್ಕಿನಡಿ ಪುರಸಭೆ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಗಳ ಕುರಿತು ಮಾಹಿತಿ ನೀಡಲು 4,40.432 ರು. ಕಟ್ಟುವಂತೆ ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರಿಗೆ ಪುರಸಭೆ ಆದೇಶಿಸಿರುವ ಕುತೂಹಲಕಾರಿ ಘಟನೆ ನಡೆದಿದೆ.
ಸಾಮಾಜಿಕ ಕಾರ್ಯಕರ್ತ ಕೆ.ಎಂ ರಘು ಎಂಬುವರು ಪುರಸಭೆ 2007 ರಿಂದ ಫೆ. 2013ನೇ ಇಸವಿಯವರೆಗೆ ನಡೆದಿರುವ ಕಾಮಗಾರಿಗಳ ವಿವರ ಕೇಳಿದ್ದಾರೆ. ಆದರೆ ಈ  ಮಾಹಿತಿ ಪಡೆಯಲು ನೀವು 2,38,820 ರು. ಪಾವತಿಸಬೇಕು. ನಂತರ ನಾವು ಮಾಹಿತಿ ನೀಡುತ್ತೇವೆ ಎಂದು ಹಿಂಬರಹ ನೀಡಿದ್ದಾರೆ.
ಅದೇ ರೀತಿ ಪುರಸಭೆಯ ದ್ವಿತೀಯ ದರ್ಜೆ ಸಹಾಯಕಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಎಷ್ಟು ಕಡತಗಳನ್ನು ವಿಲೇವಾರಿ ಮಾಡಿದ್ದಾರೆಂದು ಮತ್ತೊಂದು ಮಾಹಿತಿ ಕೇಳಿದ್ದಾರೆ. ಇದಕ್ಕೆ ಪುರಸಭೆಯವರು 2,01,612 ರು. ಕಟ್ಟಿ ನಂತರ ಮಾಹಿತಿ ನೀಡುತ್ತೇವೆ ಎಂದು ಹಿಂಬರಹ ನೀಡುವ  ಮೂಲಕ ಮಾಹಿತಿ ಹಕ್ಕಿನಡಿ ಪುರಸಭೆಯ ಕಾಮಗಾರಿ ತಿಳಿಯಲು ಯತ್ನಿಸಿದ ವ್ಯಕ್ತಿಗೆ ಸಖತ್ ಶಾಕ್ ನೀಡಿದ್ದಾರೆ.  
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ರಘು, ಪುರಸಭೆಯವರು ಸಾರ್ವಜನಿಕರ ಭಾವನೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಸರ್ಕಾರದ ನಿಯಮದಂತೆ ಕೇವಲ 5 ರಿಂದ 7 ವರ್ಷ ಒಂದೇ ಕಚೇರಿಯಲ್ಲಿ ಕೆಲಸ ಮಾಡಬಹುದೆಂಬ ನಿಯಮವಿದ್ದರೂ ಕೆಲ ಸಿಬ್ಬಂದಿ ಹಲವಾರು ವರ್ಷಗಳಿಂದ ಇದೇ ಕಚೇರಿಯಲ್ಲಿ ಕಾಯಂ ಆಗಿ ಠಿಕಾಣಿ ಹೂಡಿದ್ದಾರೆ. ಪುರಸಭೆಯ ಕೆಲವು ಸಿಬ್ಬಂದಿ ವ್ಯಾಪಕ ಭ್ರಷ್ಟಾಚಾರದಲ್ಲಿ ಮುಳುಗಿದ್ದು ಮಾಹಿತಿ ನೀಡಿದರೆ ಸಿಕ್ಕಿಹಾಕಿಕೊಳ್ಳುವ ಭಯದಿಂದ ಈ ರೀತಿ ಲಕ್ಷಾನುಗಟ್ಟಲೇ ಹಣ ನೀಡಲು ಆದೇಶಿಸಿದ್ದಾರೆಂದು ಅವರು ಆರೋಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement