ವಿಶ್ವ ಆರೋಗ್ಯ ದಿನ ಪ್ರಯುಕ್ತ ಇಂದು ಜಾಥಾ
ಕ.ಪ್ರ.ವಾರ್ತೆ ಮೈಸೂರು ಏ.6
ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಬಿಜಿಎಸ್ ಅಪೋಲೋ ಆಸ್ಪತ್ರೆ ವತಿಯಿಂದ ಏ. 7ರಂದು ಜನಜಾಗೃತಿ ಜಾಥಾ ಏರ್ಪಡಿಸಿದೆ. ಅಂದು ಬೆಳಗ್ಗೆ 8 ಗಂಟೆಗೆ ನಡೆಯುವ ಜಾಥಾದಲ್ಲಿ ರಾಜ್ಯ ಕ್ರಿಕೆಟ್ ಅಕಾಡೆಮಿ ನಿರ್ದೇಶಕ ಎಸ್.ಎಂ. ಕಿರ್ಮಾನಿ ಭಾಗವಹಿಸಿ ಪ್ರಮಾಣ ವಚನ ಬೋಧಿಸುವರು ಎಂದು ಆಸ್ಪತ್ರೆ ವೈದ್ಯಕೀಯ ಸೇವಾ ವಿಭಾಗದ ನಿರ್ದೇಶಕ ಡಾ. ಸೋಮನಾಥ್ ತಿಳಿಸಿದರು.