11ಕ್ಕೆ ಕ್ರಿಕೆಟ್ ತರಬೇತಿ ಶಿಬಿರ
ಹಾಸನ: ಕ್ರಿಕೇಟರ್ಸ್ ಅಸೋಸಿಯೇಷನ್ ಆಫ್ ಹಾಸನ ಇವರು ಏ.11 ರಿಂದ 18 ವರ್ಷ ವಯೋವುತಿಯೊಳಗಿನ ಬಾಲಕ ಮತ್ತು ಬಾಲಕಿಯರಿಗೆ ನಾಲ್ಕು ವಾರಗಳ ಕ್ರಿಕೆಟ್ ತರಬೇತಿ ಶಿಬಿರವನ್ನು ಜಿಲ್ಲಾ ಕ್ರೀಡಾಂಗಣ ಬಳಿ ಇರುವ ತರಬೇತಿ ಮೈದಾನದಲ್ಲಿ ಆಯೋಜಿಸಲಾಗಿದೆ. ಭಾಗವಹಿಸಲು ಇಚ್ಛಿಸುವ ಆಟಗಾರರು ಹೆಚ್ಚಿನ ವಿವರಗಳಿಗೆ ಏ.10ರೊಳಗಾಗಿ ತಂಡದ ಬಿ.ಟಿ. ಮುರುಳೀಧರ ಮೊ: 9945278963 ಅಥವಾ ಕಾರ್ಯದರ್ಶಿ ಎಂ.ಕೆ. ರವಿಶಂಕರ್ ಮೊ: 9448459066 ಸಂಪರ್ಕಿಸಬೇಕೆಂದು ತಿಳಿಸಲಾಗಿದೆ.
ಪವರ್ ಪ್ರಾಜೆಕ್ಟ್ ಸಮೀಪ ಚಿರತೆ
ಅರಕಲಗೂಡು: ಪಟ್ಟಣಕ್ಕೆ ಸಮೀಪದ ಅಡಿಕೆಬೊಮ್ಮನಹಳ್ಳಿ ಏತ ನೀರಾವರಿ ಯೋಜನೆಯ ಪವರ್ ಪ್ರಾಜೆಕ್ಟ್ ಬಳಿ ರಾತ್ರಿ ವೇಳೆ ಚಿರತೆಗಳು ಇರುವುದು ತಿಳಿದುಬಂದಿದ್ದು, ಇದರಿಂದ ಜನತೆ ಆತಂಕ ಗೊಂಡಿದ್ದಾರೆ. ಪವರ್ ಪ್ರಾಜೆಕ್ಟ್ನಲ್ಲಿ ಕಾವಲುಗಾರರು ರಾತ್ರಿ ವೇಳೆ ಚಿರತೆಗಳು ಚೀರುತ್ತಿದ್ದುದನ್ನು ಕೇಳಿ ತಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರಾದರೂ ಚಿರತೆಗಳು ಕಾಣಸಿಗಲಿಲ್ಲ. ಮತ್ತೆ ಬೆಳಿಗ್ಗೆ ಸ್ಥಳಕ್ಕೆ ತೆರಳಿದಾಗ ಚಿರತೆಓಡಾಡಿರುವ ಗುರುತುಗಳು ಕಂಡು ಬಂದಿವೆ ಎಂದು ಹೇಳಲಾಗಿದೆ.