ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಾವೇರಿ ನದಿಗೆ ಹಾರಿಅಣ್ಣ-ತಂಗಿ ಆತ್ಮಹತ್ಯೆ

Rashmi Kasaragodu
Updated On : 8 Apr 2013, 12:33 pm

ಶ್ರೀರಂಗಪಟ್ಟಣ: ಕೌಟುಂಬಿಕ ಕಲಹದಿಂದ ಬೇಸತ್ತು ಮೂವರು ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿ, ಅಣ್ಣ-ತಂಗಿ ಸಾವನ್ನಪ್ಪಿ, ತಾಯಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಭಾನುವಾರ ಪಟ್ಟಣದಲ್ಲಿ ನಡೆದಿದೆ. ಪಾಂಡವಪುರ ತಾಲೂಕಿನ ವಡ್ಡರಹಳ್ಳಿ ಗ್ರಾಮದ ಭಾಗ್ಯ (25), ಸುರೇಶ್ (30) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ತಾಯಿ ಗೌರಮ್ಮ (50) ಪ್ರಾಣಾಪಾಯದಿಂದ ಪಾರಾಗಿದ್ದಾರೆ. 5 ವರ್ಷಗಳ ಹಿಂದೆ ವಡ್ಡರಹಳ್ಳಿ ಗ್ರಾಮದ ಮಧು ಎಂಬವರನ್ನು ಭಾಗ್ಯ ಪ್ರೇಮ ವಿವಾಹವಾಗಿದ್ದಳು. ಮದುವೆ ನಂತರ ಬೆಂಗಳೂರಿನ ಶ್ರೀನಗರದಲ್ಲಿ ಭಾಗ್ಯ ಮತ್ತು ಮಧು ವಾಸಿಸುತ್ತಿದ್ದರು. ಕಳೆದ ಶುಕ್ರವಾರ ಭಾಗ್ಯ ಮತ್ತು ಮಧು ನಡುವೆ ಜಗಳ ನಡೆದಿದೆ. ಇದರಿಂದ ಬೇಸತ್ತ ಭಾಗ್ಯ ತಮ್ಮ ತಾಯಿ ಗೌರಮ್ಮ ಮತ್ತು ಬುದ್ಧಿಮಾಂದ್ಯ ಸುರೇಶ್‌ನೊಂದಿಗೆ ಬೆಂಗಳೂರಿನಿಂದ ಶ್ರೀರಂಗಪಟ್ಟಣಕ್ಕೆ ಆಗಮಿಸಿದ್ದಾರೆ. ಪಟ್ಟಣದ ರೇಲ್ವೆ ನಿಲ್ದಾಣದ ಹತ್ತಿರದ ಮುತ್ತು ಮಾರಮ್ಮ ದೇವಸ್ಥಾನದ ಬಳಿಯ ಕಾವೇರಿ ನದಿಗೆ ಮಧು ಪತ್ನಿ ಭಾಗ್ಯ, ತಾಯಿ ಗೌರಮ್ಮ ಮತ್ತು ಅಣ್ಣ ಸುರೇಶ್ ಮೂವರು ತಬ್ಬಿಕೊಂಡು ಕಾವೇರಿ ನದಿಗೆ ಹಾರಿದ್ದಾರೆ. ಈ ವೇಳೆ ಪ್ರಜ್ಞೆ ತಪ್ಪಿ ಗೌರಮ್ಮ ನದಿಯ ದಡದಲ್ಲಿ ಬಿದ್ದಿದ್ದರು. ಭಾನುವಾರ ಬೆಳಿಗ್ಗೆ ಎಚ್ಚರವಾದಾಗ  ಸಾರ್ವಜನಿಕರಿಗೆ ಈ ವಿಷಯ ತಿಳಿಸಿದ್ದಾಳೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement