ಕುಡಿಯುವ ನೀರಿಗೆ ರುದ್ರನರ್ತನ
ಕ.ಪ್ರ.ವಾರ್ತೆ ಆಲೂರು ಏ.7ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಕುಡಿಯವ ನೀರಿಗೆ ರುದ್ರನರ್ತನ. ಈ ಸಮಸ್ಯೆಗೆ ಪರಿಹಾರ ದೊರೆಯುವ ಲಕ್ಷಣಗಳಂತೂ ಕಾಣುತ್ತಿಲ್ಲ. ಏಕೆಂದರೆ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಪಟ್ಟಣದಲ್ಲಿ ಇರುವ ನೀರಿನ ಟ್ಯಾಂಕ್ಗಳಿಗೆ ನೀರನ್ನು ತುಂಬಲು ಸಾಧ್ಯವಾಗುತ್ತಿಲ್ಲ.ಈವರೆಗೂ ಎರಡು ಟ್ರಾನ್ಸ್ ಫಾರ್ಮರ್ಗಳ ಅಳವಡಿಕೆಗೆ ಟೆಂಡರ್ ಪ್ರಕ್ರಿಯೆ ಪ್ರಾರಂಭವೇ ಆಗಿಲ್ಲ. ಒಟ್ಟು 13 ಲಕ್ಷ ರು. ಮೊತ್ತದ ಟೆಂಡರ್ಗೆ ಜಿಲ್ಲಾಧಿಕಾರಿ ಅನುಮೋದನೆ ಸಿಗಬೇಕಿದೆ. ಇದನ್ನೆಲ್ಲ ಗಮನಿಸಿದರೆ ಸದ್ಯಕ್ಕೆ ಈ ಕಾಮಗಾರಿ ಪೂರ್ಣಗೊಳ್ಳುವ ಲಕ್ಷಣಗಳು ಕಾಣದಾಗಿದೆ. ಶೀಘ್ರವೇ ಪೂರ್ಣಗೊಳ್ಳದಿದ್ರೆ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರೆಯುವುದು ಅಸಾಧ್ಯವಾಗಿದೆ.ದಿನದಿಂದ ದಿನಕ್ಕೆ ವಿದ್ಯುತ್ ಉತ್ಪಾದನೆ ಕಡಿಮೆಯಾಗುತ್ತಿದ್ದು, ರಾಯಚೂರು ಥರ್ಮಲ್ ಪವರ್ ಕಾರ್ಪೋರೇಷನ್ನ ಒಂದೊಂದೇ ಘಟಕಗಳು ಕೆಟ್ಟು ಹೋಗುತ್ತಿದ್ದು, ಇದು ಚಿಂತಿಸಬೇಕಾದ ವಿಷಯವಾಗಿದೆ. ಸದ್ಯಕ್ಕೆ ತಾಲೂಕಿನಲ್ಲಿ ಗ್ರಾಮೀಣ ಭಾಗಕ್ಕೆ ಮೂರು ಗಂಟೆ ತ್ರಿಫೇಸ್, 5 ಗಂಟೆ ಸಿಂಗಲ್ ಫೇಸ್. ಅದರಲ್ಲಿ ತುರ್ತು ಪರಿಸ್ಥಿತಿಯಲ್ಲಿ ಇದರಲ್ಲೂ ಕಡಿತಗೊಳ್ಳಬಹುದಾಗಿದೆ. ಪಟ್ಟಣ ಪ್ರದೇಶಗಳಲ್ಲಿ ಬೆಳಗ್ಗೆ 6 ಗಂಟೆಯಿಂದ ಸಂಜೆ 6ರ ವರೆಗೆ ವಿದ್ಯುತ್ ನೀಡಿದರೆ 6 ರಿಂದ ರಾತ್ರಿ 10 ರ ವರೆಗೆ 2 ಗಂಟೆ ವಿದ್ಯುತ್ ನಿಲುಗಡೆ ಮಾಡಲಾಗುತ್ತಿದ್ದು, ರಾತ್ರಿ 10ರ ನಂತರ ಯಾವ ಸಂದರ್ಭದಲ್ಲಿ ಬೇಕಾದರೂ ವಿದ್ಯುತ್ ನಿಲುಗಡೆ ಮಾಡಲಾಗುತ್ತಿದೆ. ಪಟ್ಟಣ ಪಂಚಾಯ್ತಿಯವರು ಕುಡಿಯವ ನೀರಿಗಾಗಿ ನಾಲ್ಕು ಕಡೆ ಬೋರ್ವೆಲ್ ಕೊರೆಸಿದ್ದು, ಕಳೆದ ಒಂದು ವರ್ಷದಿಂದಲೂ ಈವರೆಗೂ ವಿದ್ಯುತ್ ಸಂಪರ್ಕ ಪಡೆದುಕೊಂಡಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಇತ್ತ ಗಮನಹರಿಸಿ ಎಕ್ಸ್ಪ್ರೆಸ್ ಮಾರ್ಗದ ಕಾಮಗಾರಿ ಪೂರ್ಣಗೊಳ್ಳುವಂತೆ ಮಾಡಿ ಪಟ್ಟಣದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ. ಇಲ್ಲದಿದ್ದರೆ ಸಾರ್ವಜನಿಕ ರು ರೊಚ್ಚಿಗೆದ್ದು ಪಪಂ ಅಧಿಕಾರಿಗಳ ಹಾಗೂ ಸದಸ್ಯರ ವಿರುದ್ಧ ತೀವ್ರ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ.ಪಟ್ಟಣದ ಪ್ರದೇಶದವರ ಸ್ಥಿತಿ ಇದಾದರೆ ಗ್ರಾಮೀಣ ಭಾಗದ ಜನರ ಗೋಳು ಹೇಳತೀರದು. ತಾಲೂಕಿನ 15 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕುಡಿಯಲು ನೀರಿಲ್ಲದೆ ಜನ ಜಾನುವಾರು ತೊಂದರೆ ಅನುಭವಿಸುತ್ತಿದ್ದರೆ ಈ ಭಾಗದಲ್ಲಿ ಬಹುತೇಕ ಎಲ್ಲ ಬೆಳೆಗಳು ನಾಶವಾಗಿ ಹೋಗಿವೆ.ತಾಲೂಕಿನ 320 ಗ್ರಾಮಗಳಲ್ಲಿ ಹೆಚ್ಚಿನ ಗ್ರಾಮಗಳಲ್ಲಿ ಈವರೆಗೂ ಕಿರು ನೀರು ಸರಬರಾಜು ಯೋಜನೆ ಮಾಡಲಾಗಿಲ್ಲ. ನೀರಿಗೆ ಬೆರಳೆಣಿಕೆಯಷ್ಟು ಕೈ ಪಂಪ್ ಹಾಗೂ ತೆರೆದ ಬಾವಿಗಳನ್ನು ಜನತೆ ಆಶ್ರಯಿಸಬೇಕಿದೆ. ಇವುಗಳಲ್ಲೂ ನೀರು ಸಮರ್ಪಕವಾಗಿ ಬಾರದೆ ನೀರಿಗಾಗಿ ಒತ್ತಾಯಿಸಿ ಗ್ರಾಮ ಪಂಚಾಯ್ತಿಗಳಿಗೆ ಬೀಗ ಜಡಿದು ಪಿಡಿಓಗಳಿಗೆ ಘೇರಾವ್ ಹಾಕಿ ಪ್ರತಿಭಟಿಸಿದರೂ ಪ್ರಯೋಜನವಾಗಲಿಲ್ಲ.ಜಿಲ್ಲಾ ಪಂಚಾಯ್ತಿ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದರ ಫಲವಾಗಿ ಅಂತಹ ಗ್ರಾಮಗಳಿಗೆ ಟ್ಯಾಂಕರ್ನಲ್ಲಿ ನೀರು ನೀಡಲಾಗುತ್ತಿದ್ದು, ಇದು ಆನೆಗೆ ಅರೆಕಾಸಿನ ಮಜ್ಜಿಗೆ ನೀಡಿದಂತಾಗಿದೆ. ಕುಡಿವ ನೀರಿನ ಸ್ಥಿತಿ ಇದಾದರೆ ತಾಲೂಕಿನಲ್ಲಿ ಶೇ. 90 ರಷ್ಟು ರೈತರು ಈ ಬಾರಿ ನೀರಿಲ್ಲದೆ ಬೇಸಿಗೆ ಬೆಳೆ ಬೆಳೆಯಲಾಗುತ್ತಿಲ್ಲ.ತಾಲೂಕಿನ 986 ಕೆರೆಗಳ ಪೈಕಿ ನೀರಿರುವುದು ಕೆಲವೇ ಕೆಲವು ಕೆರೆಗಳಲ್ಲಿ ಅದೂ ಶೇ. 50 ರಷ್ಟು ನೀರು. 379 ಕೆರೆಗಳು ಸಂಪೂರ್ಣ ಬತ್ತಿ ಹೋಗಿವೆ. 410 ಕೆರೆಗಳು ಒತ್ತುವರಿಯಾಗಿದ್ದು, ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಕೆರೆಗಳ ಒತ್ತುವರಿ ತೆರವುಗೊಳಿಸಿ ಹೂಳು ತೆಗೆಸುವಂತೆ ಒತ್ತಾಯಿಸಿ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಅವರ ಕೂಗು ಅಧಿಕಾರಿಗಳಿಗೆ ಕೇಳಿಸಿಯೇ ಇಲ್ಲ...