ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಡಿ.ಮಲ್ಲೇಶ್ಗೆ ಕಾಂಗ್ರೆಸ್ ಟಿಕೆಟ್: ಬೆಂಬಲಿಗರ ಸಭೆ

Rashmi Kasaragodu
Updated On : 7 Apr 2013, 11:27 am

ಸಕಲೇಶಪುರ: ಭಾರಿ ಕುತೂಹಲಕ್ಕೀಡಾಗಿದ್ದ ಸಕಲೇಶಪುರ-ಆಲೂರು-ಕಟ್ಟಾಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಹೆಸರು ಪ್ರಕಟಣೆಗೊಂಡ ನಂತರ ಪಕ್ಷದಲ್ಲಿ ಬಹಳಷ್ಟು ಚಟುವಟಿಕೆ ಪ್ರಾರಂಭಗೊಂಡಿದ್ದು, ಡಿ.ಸಿ. ಸಣ್ಣಸ್ವಾಮಿ  ಬೆಂಬಲಿಗರು ಶನಿವಾರ ಸಭೆ ನಡೆಸಿ, ಪಕ್ಷೇತರರಾಗಿ ಸ್ಪರ್ಧಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ.  ಹಲವು ಬಣಗಳಾಗಿರುವ ಕಾಂಗ್ರೆಸ್ನಲ್ಲಿ, ಮೋಟಮ್ಮ ಅಭ್ಯರ್ಥಿಯಾದರೆ ಒಂದಾಗಿ ದುಡಿಯುವ ಅಲೋಚನೆಯಲ್ಲಿ ಇದ್ದವರಿಗೆ ಡಿ. ಮಲ್ಲೇಶ್ಗೆ  ಟಿಕೆಟ್ ನೀಡಿರುವುದು ಈ ಗುಂಪುಗಳಿಗೆ ಬಿಸಿ ಎಣ್ಣೆ ಸುರಿದಂತಾಗಿದೆ.  ಕೆಲವು ದಿನಗಳಿಂದ ಕಾಂಗ್ರೆಸ್ ಟಿಕೆಟ್ಗಾಗಿ ಕಸರತ್ತು ನಡೆಸುತ್ತಿದ್ದ ಕಾಂಗ್ರೆಸ್ ತಾಲೂಕು ಸಮಿತಿಯಲ್ಲೆ ಎರಡು ಗುಂಪುಗಳಾಗಿ ಒಂದು ಗುಂಪು ಡಿ.ಸಿ.ಸಣ್ಣಸ್ವಾಮಿಯವರಿಗೆ ಮತ್ತೊಂದು ಡಿ.ಮಲ್ಲೇಶ್ ಪರವಾಗಿತ್ತು. ಈ ಎರಡು ಗುಂಪುಗಳನ್ನು ಹೊರತುಪಡಿಸಿ ಪಕ್ಷದ ಪ್ರಮುಖರು ದೆಹಲಿಗೂ ಹೋಗಿ ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ಅವರ ಪರ ಕಸರತ್ತು ನಡೆಸಿದ್ದರು. ಕೆಲ ಕಾರ್ಯಕರ್ತರು ಹಾಗೂ ಕೆಲ ಮುಖಂಡರು ಡಿ.ಮಲ್ಲೇಶ್ಗೆ ಟಿಕೆಟ್ ನೀಡಿದರೆ ಸಾಮೂಹಿಕ ರಾಜಿನಾಮೆ ನೀಡುವುದಾಗಿಯೂ ತಾಲೂಕು ಯುವ ಕಾಂಗ್ರೆಸ್ ಮುಖಂಡರು ಡಿ.ಸಿ.ಸಣ್ಣಸ್ವಾಮಿಗೆ ಟಿಕೆಟ್ ನೀಡದ ಸಂದರ್ಭದಲ್ಲಿ ನಾವು ಬಂಡಾಯ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅವರನ್ನು ಬೆಂಬಲಿಸುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದರು. ಆದರೆ ಕೊನೆಗೆ ಬಂದ ಪಟ್ಟಿಯಲ್ಲಿ ಡಿ.ಮಲ್ಲೇಶ್ಗೆ ಈ ಕ್ಷೇತ್ರದಲ್ಲಿ ಸ್ಪರ್ಧಿಸುವ ಅವಕಾಶ ದೊರೆತಿದೆ. ಹಾಗಾಗಿ ಮುಖಂಡರು, ಕಾರ್ಯಕರ್ತರು ಪಕ್ಷದ ಪರವಾಗಿ ಎಷ್ಟರ ಮಟ್ಟಿಗೆ ಕೆಲಸ ಮಾಡಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ. ಈ ಹಿಂದೆ ಬೇಲೂರು ಕ್ಷೇತ್ರದಿಂದ ಎರಡು ಬಾರಿ ಸೋತಿರುವ ಡಿ.ಮಲ್ಲೇಶ್ ಇಲ್ಲಿ ಗೆಲ್ಲುವುದು ಅಸಾಧ್ಯ. ಹಾಗೂ ಕಾಂಗ್ರೆಸ್ ಪಕ್ಷದವರಿಗೇ ಅಪರಿಚಿತರಾಗಿರುವ ಮಲ್ಲೇಶ್ ಇನ್ನೂ ಜನರಿಗೆ ಹೇಗೆ ಪರಿಚಯವಿರಲು ಸಾಧ್ಯ. ಇವರನ್ನು ಬೆಂಬಲಿಸಿ ಮತಯಾಚಿಸಲು ಹೋದರೆ ಜನರ ವಿರೋಧ ವ್ಯಕ್ತವಾಗುವುದಂತು ಖಂಡಿತ ಎಂದು ಪಕ್ಷದ ಪ್ರಮುಖರ ನಿಲುವು. ತಾಲೂಕು ಬ್ಲಾಕ್ ಅಧ್ಯಕ್ಷ ವಿದ್ಯಾಶಂಕರ್ ಸೇರಿದಂತೆ ಅನೇಕ ಪ್ರಮುಖರು ರಾಜಿನಾಮೆಗೆ ಮುಂದಾಗಿದ್ದು ಕೆಲಕಾಲ ಕಾದು ನಿರ್ಣಯ ಕೈಗೂಳ್ಳಲಿದ್ದಾರೆ ಎಂದೂ ಹೇಳಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement