ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬಿಜೆಪಿ ವ್ಯಕ್ತಿ ಆಧಾರಿತವಲ್ಲ, ತತ್ವ, ಸಿದ್ಧಾಂತ ಒಳಗೊಂಡ ಪಕ್ಷ - ಎನ್.ಡಿ. ಪ್ರಸಾದ್

Rashmi Kasaragodu
Updated On : 7 Apr 2013, 11:32 am

ಕ.ಪ್ರ. ವಾರ್ತೆ೤ ಅರಸೀಕೆರೆ೤ ಏ.7
ಅಖಂಡ ಭಾರತದ ಪರಿಕಲ್ಪನೆಯಲ್ಲಿ ಅಸ್ತಿತ್ವಕ್ಕೆ ಬಂದ ಭಾರತೀಯ ಜನತಾ ಪಕ್ಷ ಎಂದಿಗೂ ವ್ಯಕ್ತಿ ಆಧಾರಿತ ಪಕ್ಷವಾಗದೆ ದೇಶ ಪ್ರೇಮ ಆದರ್ಶ, ತತ್ವ ಸಿದ್ದಾಂತಗಳನ್ನು ಒಳಗೊಂಡ ಪಕ್ಷವಾಗಿದೆ ಎಂದು ಜಿಲ್ಲಾ ಬಿಜೆಪಿ ಮಾಜಿ ವಕ್ತಾರ ಎನ್.ಡಿ.ಪ್ರಸಾದ್ ಅವರುತಿಳಿಸಿದರು.
 ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ಪಕ್ಷದ ಸಂಸ್ಥಾಪನಾ ದಿನವಾದ ಭಾನುವಾರ ಮುಖಂಡರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
 ದೇಶಪ್ರೇಮಿ ಪಂಡಿತದೀನದಯಾಳ್  ಉಪಾಧ್ಯಾಯ ಹಾಗೂ ಶ್ಯಾಮ್ಪ್ರಕಾಶ್ ಮುಖರ್ಜಿ ನೇತೃತ್ವದಲ್ಲಿ 1950 ರಲ್ಲಿ ಸ್ಥಾಪಿಸಿದ ಭಾರತೀಯ ಜನಸಂಘ ತುರ್ತು ಪರಿಸ್ಥಿತಿ ನಂತರ ಭಾರತೀಯ ಜನತಾ ಪಕ್ಷವಾಗಿ ಮಾರ್ಪಟ್ಟು ವಾಜಪೇಯಿ ಹಾಗೂ ಲಾಲ್ಕೃಷ್ಣ ಆದ್ವಾನಿ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಪ್ರಜ್ಞೆಯನ್ನು ಜನರಲ್ಲಿ ಜಾಗೃತಿಗೊಳಿಸುವ ಮೂಲಕ ಉನ್ನತ ಆದರ್ಶ ಸಿದ್ದಾಂತಗಳನ್ನು ಅಳವಡಿಸಿಕೊಂಡು ಬಿಜೆಪಿ ರಾಷ್ಟ್ರೀಯ ಪಕ್ಷವಾಗಿ ಬೆಳೆದಿದೆ ಎಂದು ಹೇಳಿದರು.
ಈ ಪಕ್ಷದಲ್ಲಿ ವ್ಯಕ್ತಿ ಶಕ್ತಿಗಿಂತಲ್ಲೂ ಸಂಘಟಿತ ಶಕ್ತಿಗೆ ಹೆಚ್ಚಿನ ಮನ್ನಣೆ ನೀಡುವ ಕಾರಣ ಬಿಜೆಪಿ ಪಕ್ಷ ಎಂದಿಗೂ ವ್ಯಕ್ತಿ ಆಧಾರಿತ ಪಕ್ಷವಾಗಿ ಬೆಳೆಯಲು ಸಾಧ್ಯವಿಲ್ಲ. ಸಂಘಟನೆಯಿಂದ ಮಾತ್ರ ಶಕ್ತಿ ಪ್ರದರ್ಶನ ಮಾಡಬಹುದು ಎಂಬುದನ್ನು ನಾವು ಮನಗಾಣ ಬೇಕೆಂದರು.
ಪರಿಶುದ್ಧ ಪಕ್ಷವಾಗಿ:   ರಾಜ್ಯದಲ್ಲಿ ಮೊದಲ ಭಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಇಂದು ಕಳಂಕಿತ ಎಲ್ಲಾ ವ್ಯಕ್ತಿಗಳನ್ನು ಪಕ್ಷದಿಂದ ಹೊರ ಹಾಕುವ ಮೂಲಕ ಪರಿಶುದ್ಧ ಪಕ್ಷವಾಗಿ ಹೊರಹೊಮ್ಮಿದೆ ಎಂದು ನುಡಿದರು.
ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತ ನೀತಿಗೆ ಎಂದು ಮಣೆ ಹಾಕದ ಪಕ್ಷದ ವಿರುದ್ಧಸುಳ್ಳು ಆರೋಪಗಳನ್ನು ಮಾಡುವ ಜನರಿಗೆ ಸೂಕ್ತ ಉತ್ತರವನ್ನು  ಈ ಚುನಾವಣೆಯಲ್ಲಿ ನೀಡಲು ಕಾರ್ಯಕರ್ತರು ಸಿದ್ದರಾಗಬೇಕೆಂದರು.
 ತಾಲೂಕು ಅಧ್ಯಕ್ಷ ಬಾಳೇಗೌಡ ಪ್ರ.ಕಾರ್ಯದರ್ಶಿ ಶ್ರೀಧರ್, ತಾಪಂ ಸದಸ್ಯ ಬಿ.ಆರ್.ಜಯಣ್ಣ, ನಗರಾಧ್ಯಕ್ಷ ಭೈರೇಶ್, ಟಿ.ವಿ.ಅರುಣ್ಕುಮಾರ್, ಕೆ.ಆರ್.ಮುರುಳೀಧರ್, ಡಿ.ಬಿ.ಗಂಗಾಧರ್, ಯುವ ಘಟಕದ ಅಧ್ಯಕ್ಷ ದುಮ್ಮೇನಹಳ್ಳಿ ರಮೇಶ್, ವಕೀಲರಾದ ಕೆ.ವಿ.ಹಿರಿಯಣ್ಣ, ಮಹಿಳಾ ಘಟಕ ಅಧ್ಯಕ್ಷೆ ಶೈಲಜಾ ಇನ್ನೂ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement