11ರಂದು ಜೆಡಿಯು ಅಭ್ಯರ್ಥಿಗಳ ಹೆಸರು ಪ್ರಕಟ: ಜಿಲ್ಲಾಧ್ಯಕ್ಷ ಸತೀಶ್
ಕನ್ನಡಪ್ರಭ ವಾರ್ತೆ ಹಾಸನ ಏ 8
ಜಿಲ್ಲೆಯ ಜೆಡಿಯು ಅಭ್ಯರ್ಥಿಗಳ ಅಂತಿಮ ಪಟ್ಟೆ ಗುರುವಾರ ಪ್ರಕಟಗೊಳ್ಳಲಿದೆ ಎಂದು ಜೆಡಿಯು ಜಿಲ್ಲಾಧ್ಯಕ್ಷ ಡಿ.ಎಚ್.ಸತೀಶ್ ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಕಚೇರಿಯಲ್ಲಿ ನಡೆದ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳ ಸಭೆಯಲ್ಲಿ ಜಿಲ್ಲಾ ವಿಧಾನಸಭಾ ಕ್ಷೇತ್ರಗಳ ಆಕಾಂಕ್ಷಿಗಳ ಪಟ್ಟಿಯನ್ನು ಜಿಲ್ಲಾ ಸಮಿತಿ ಶಿಫಾರಸು ಮಾಡಿ ರಾಜ್ಯ ಸಮಿತಿಗೆ ಕಳುಹಿಸಲು ಒಪ್ಪಿಗೆ ಸೂಚಿಸಲಾಗಿದೆ.
ಜಿಲ್ಲೆಯಲ್ಲಿ ಪಕ್ಷಕ್ಕಾಗಿ ದುಡಿದ ಹಾಗೂ ಸಂಘಟನೆಗೆ ಶ್ರಮಿಸಿದವರ ಹೆಸರು ಶಿಫಾರಸು ಮಾಡಲಾಗುತ್ತದೆ ಎಂದರು.
ಹಾಸನ ಕ್ಷೇತ್ರದಿಂದ ಎಚ್.ಎ. ನಂಜೇಗೌಡ ಮತ್ತು ನವೀನ್ ಕುಮಾರ್, ಹೊಳೆನರಸೀಪುರ ಕ್ಷೇತ್ರದಿಂದ ಮಳಲಿ ನಾರಾಯಣಗೌಡ ಮತ್ತು ಡಿ.ಎಚ್.ಸತೀಶ್, ಬೇಲೂರು ಕ್ಷೇತ್ರದಿಂದ ಅಕ್ಬರ್ಪಾಷ ಮತ್ತು ಚನ್ನೇಗೌಡ, ಅರಸೀಕೆರೆ ಕ್ಷೇತ್ರದಿಂದ ಬಿ.ಕೆ.ಸೋಮಶೇಖರ ಮತ್ತು ಅಶೋಕ, ಅರಕಲಗೂಡು ಕ್ಷೇತ್ರದಿಂದ ಎಚ್.ಎಂ.ನವೀನ್ ಹಾಗೂ ಎಂ.ಎನ್.ದೇವರಾಜು, ಚನ್ನರಾಯಪಟ್ಟಣದ ಶ್ರವಣಬೆಳಗೊಳ ಕ್ಷೇತ್ರದಿಂದ ಡಾ.ಎನ್.ಬಿ.ನಂಜಪ್ಪ ಮತ್ತು ಬಿ.ಕೆ.ಚಲುವೇಗೌಡ ಮತ್ತು ಸಕಲೇಶಪುರ ಕ್ಷೇತ್ರದಿಂದ ವೆಂಕಟೇಶ್ ಹಾಗೂ ಎಚ್.ಡಿ.ಪುಟ್ಟಯ್ಯ ಈ ಪಟ್ಟಿಯನ್ನು ಶಿಫಾರಸು ಮಾಡಲಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ನಂಜೇಗೌಡ, ಮಲ್ಲೇಶ್, ವೆಂಕಟೇಶ್ ಇತರರು ಇದ್ದರು.