'ಉತ್ತಮ ಮಾರ್ಗದಲ್ಲಿ ನಡೆಸುವವರ ಆಯ್ಕೆ ಮಾಡಿ'
ಕ.ಪ್ರ. ವಾರ್ತೆ, ಹಾಸನ ಏ.8
ರಾಜ್ಯವನ್ನು ಉತ್ತಮ ಮಾರ್ಗದಲ್ಲಿ ನಡೆಸುವಂಥ ಯೋಗ್ಯರನ್ನು ಮತದಾರರು ಆಯ್ಕೆ ಮಾಡಬೇಕೆಂದು ಜಿಲ್ಲಾ ನಾಗರಿಕ ವೇದಿಕೆ ಸಂಚಾಲಕ ಎಸ್.ಪಿ.ರಾಜೀವ್ಗೌಡ ಕೋರಿದ್ದಾರೆ.
ಕಳೆದ ತಿಂಗಳು ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕರ್ನಾಟಕದಾದ್ಯಂತ ಮತದಾರ ತನ್ನ ಪ್ರಬುದ್ಧತೆ ಮೆರೆದಿದ್ದಾನೆ. ಹಣ, ಜಾತಿ, ಹೆಂಡ ಯಾವುದಕ್ಕೂ ಮಣಿಯದೆ ತನ್ನ ಇಷ್ಟಾನುಸಾರ ನಿರಂತರ ಗೆಲವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದು ನಾನು ಮಾಡಿದ್ದೇ ದರ್ಬಾರ್ ಎಂದು ಮನಸೋ ಇಚ್ಛೆ ವರ್ತಿಸುತ್ತಿದ್ದವರು, ಹಣದ ಹೊಳೆ ಹರಿಸಿ ಗೆದ್ದೇ ಗೆಲ್ಲುತ್ತೇನೆಂದು ನಂಬಿದ್ದವರು ಹಾಗೂ ಜಾತಿ ಲೆಕ್ಕಾಚಾರದಲ್ಲಿ ಗೆಲುತ್ತಿದ್ದವರಿಗೂ ಮತದಾರರು ಸರಿಯಾದ ಬುದ್ಧಿ ಕಲಿಸಿದ್ದಾರೆ ಎಂದು ಹೇಳಿದರು.