ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕೆಜೆಪಿಯಲ್ಲೂ ಟಿಕೆಟ್ಗಾಗಿ ಅಪಸ್ವರ

Rashmi Kasaragodu
Updated On : 9 Apr 2013, 12:01 pm

ಕನ್ನಡಪ್ರಭ ವಾರ್ತೆ೤ ಹಾಸನ೤ ಏ.8
ವಿಧಾನಸಭೆ ಚುನಾವಣೆಗೆ ಪ್ರಮುಖ ಪಕ್ಷಗಳಿಗಿಂತ ಮುಂಚೆಯೇ ಕೆಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿ ಪ್ರಕಟ ಮಾಡಿರುವುದು ಜಿಲ್ಲೆಯಲ್ಲಿ ಪಕ್ಷದೊಳಗೆ ಪರಸ್ಪರ ಕಚ್ಚಾಟಕ್ಕೆ ಕಾರಣವಾಗಿದೆ. ಜಿಲ್ಲೆಯ ಸಕಲೇಶಪುರ, ಬೇಲೂರು ಮತ್ತು ಅರಸೀಕೆರೆ ಕ್ಷೇತ್ರಗಳ ಘೋಷಿತ ಅಭ್ಯರ್ಥಿಗಳ ವಿರುದ್ಧ ಕಾರ್ಯಕರ್ತರು ಮತ್ತು ಮುಖಂಡರು ಕಿಡಿಕಾರಿದ್ದು, ಕೆಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.  
ಪ್ರಥಮ ಚುಂಬನಂ ದಂತಭಗ್ನಂ ಅನ್ನೋ ಹಾಗೆ, ಕೆಜೆಪಿಗೆ ಪ್ರಥಮ ಚುನಾವಣೆಯಲ್ಲೇ ಜಿಲ್ಲೆಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಟಿಕೆಟ್ಹಂಚಿಕೆಯಲ್ಲಿ ಅನ್ಯಾಯ ಆಗಿದೆ ಎಂದು ಆರೋಪಿಸಲಾಗುತ್ತಿದೆ. ಅರಸೀಕೆರೆ ಕ್ಷೇತ್ರದಲ್ಲಿ ಯಡಿಯೂರಪ್ಪ ಅವರನ್ನು ನಂಬಿ ಬಂದ ಅನೇಕರನ್ನು ಬಿಟ್ಟು ಡಾ.ಲೋಕೇಶ್ ಅವರಿಗೆ ಟಿಕೆಟ್ ನೀಡಿರುವುದು ಹಲವರ ವಿರೋಧಕ್ಕೆ ಕಾರಣವಾಗಿದೆ. ಟಿಕೆಟ್ಗಾಗಿ ಬಿಜೆಪಿ ಬಿಟ್ಟು ಬಂದ ಕಾಟಿಕೆರೆ ಪ್ರಸನ್ನಕುಮಾರ್ ಅವರು, ಟಿಕೆಟ್ ನೀಡುವುದಾಗಿ ನಂಬಿಸಿ ಬಿಜೆಪಿ ತೊರೆಯುವಂತೆ ಮಾಡಿದ ಯಡಿಯೂರಪ್ಪ ರಾಜ್ಯ ಕಂಡ ಮಹಾನ್ ಸುಳ್ಳುಗಾರ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.ಬೇಲೂರು ಕ್ಷೇತ್ರದಲ್ಲಿ ಯಡಿಯೂರಪ್ಪಗೆ ನಿಷ್ಠರಾಗಿದ್ದ ಶಿವರುದ್ರಪ್ಪ ಮತ್ತು ಕೊರಟಗೆರೆ ಪ್ರಕಾಶ್ ಬದಲಿಗೆ ಬೇರೆ ಪಕ್ಷದಿಂದ ಬಂದಿರುವ ಎಚ್.ಎಂ.ವಿಶ್ವನಾಥ್ಗೆ ಟಿಕೆಟ್ ನೀಡಿರುವುದು ಬಂಡಾಯಕ್ಕೆ ಎಡೆಮಾಡಿಕೊಟ್ಟಿದೆ.
ಇನ್ನು ಸಕಲೇಶಪುರ-ಆಲೂರು ಕ್ಷೇತ್ರದಲ್ಲಿ ಕೆಜೆಪಿ ಅಭ್ಯರ್ಥಿಯಾಗಿರುವ ಬೆಳಗೋಡು ಉಮೇಶ್, ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದು ಅಂಥವರಿಗೆ ಟಿಕೆಟ್ ನೀಡಿರುವುದನ್ನು ಕೆಜೆಪಿ ಮುಖಂಡರು ಖಂಡಿಸಿದ್ದಾರೆ. ಉಮೇಶ್ ಬದಲಿಗೆ ಬೇರೊಬ್ಬರಿಗೆ ಟಿಕೆಟ್ ನೀಡದೇ ಹೋದ್ರೆ, ನಮ್ಮ ದಾರಿ ನಾವು ನೋಡಿಕೊಳ್ಳ ಬೇಕಾಗುತ್ತದೆ ಎಂದು ಬಿಎಸ್ವೈಗೆ ಮುಖಂಡರು ಸೆಡ್ಡು ಹೊಡೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement