ಜಿಲ್ಲಾ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಸ್ಥಾನಕ್ಕೆ ಮಹಲಿಂಗಪ್ಪ ರಾಜಿನಾಮೆ
ಕ.ಪ್ರ. ವಾರ್ತೆ ಹಾಸನ ಏ. 8
ನಿವೃತ್ತ ಐಎಎಸ್ ಅಧಿಕಾರಿ ಕೆ.ಎಂ.ಪುಟ್ಟಸ್ವಾಮಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡದಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿರುವುದಾಗಿ ಸಿ.ಎನ್.ಮಹಾಲಿಂಗಪ್ಪ ತಿಳಿಸಿದ್ದಾರೆ.
ಹೊಳೆನರಸೀಪುರ ಕ್ಷೇತ್ರದಿಂದ ಅವಕಾಶ ಸಿಕ್ಕರೆ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಿದ್ಧ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
20 ವರ್ಷಗಳಿಂದ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತನಾಗಿದ್ದು, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷನಾಗಿ,
ಸೆನೆಟ್ ಪ್ರತಿನಿಧಿಯಾಗಿ, ಜಿಲ್ಲಾ ಕನಕ ಯುವ ಪ್ರಗತಿ ವೇದಿಕೆ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿ ಕಾಂಗ್ರೆಸ್ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೆ.
ಆದರೆ ಕಳೆದ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಬಿಸಿಎಂ (ಎ) ಮಹಿಳೆಗೆ ಮೀಸಲಾದ ಶಾಂತಿಗ್ರಾಮದಿಂದ ತಮ್ಮ ಪತ್ನಿ ಗೀತಾ ಸ್ಪರ್ಧಿಸಿ 2ನೇ ಸ್ಥಾನ ಗಳಿಸಿ ಕಡಿಮೆ ಅಂತರದಿಂದ ಸೋಲಬೇಕಾಯಿತು ಎಂದು ತಿಳಿಸಿದ್ದಾರೆ.
ಹಿಂದುಳಿದ ಎಸ್. ಪುಟ್ಟಸ್ವಾಮಿಯವರಿಗೆ ಜಿಲ್ಲೆಯಲ್ಲಿ ಅಭ್ಯರ್ಥಿಯಾಗುವ ಅವಕಾಶವಿಲ್ಲ. ನಮ್ಮನ್ನು ಓಟಿಗಾಗಿ ಬಳಸಿಕೊಳ್ಳುವ ನಾವೇಕೆ ಕಾಂಗ್ರೆಸ್ನಲ್ಲಿ ಇರಬೇಕು ಎಂದು ಪ್ರಶ್ನಿಸಿರುವ ಅವರು, ಇದರಿಂದ ಬೇಸತ್ತು ರಾಜಿನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.